ಸಿದ್ದಗಂಗಾ ಮಠದಲ್ಲಿ 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

1 Min Read

ತುಮಕೂರು: ಸಿದ್ದಗಂಗಾ ಮಠದಲ್ಲಿ ಇಂದು (ಏ.5) ನಾಮಕರಣ ಮಹೋತ್ಸವ ನಡೆಯಿತು. 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಯಿತು.

ಶಿವಕುಮಾರ ಶ್ರೀಗಳ ದಾಸೋಹ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಡು ಮಕ್ಕಳಿಗೆ ಶಿವಕುಮಾರ ಅಂತಲೂ, ಹೆಣ್ಣು ಮಕ್ಕಳಿಗೆ ಶಿವಾನಿ ಅಂತಲೂ ನಾಮಕರಣ ಮಾಡಲಾಯಿತು. ಪ್ರತಿ ಮಕ್ಕಳಿಗೆ ಒಂದು ತೊಟ್ಟಿಲು, ಬಟ್ಟೆ, ಮಾಸ್ಕಿಟೋ ಕಾಯಿಲ್, ಹಾಸಿಗೆ ದಿಂಬು ಉಚಿತವಾಗಿ ವಿತರಣೆ ಮಾಡಲಾಯಿತು. ಇದನ್ನೂ ಓದಿ: ಕರುಣೆ, ವಿನಯದ ಪ್ರತಿರೂಪವಾಗಿ ನಮ್ಮೆಲ್ಲರ ಸ್ಮರಣೆಯಲ್ಲಿ ಸದಾ ಜೀವಂತ – ಶಿವಕುಮಾರ ಶ್ರೀಗಳಿಗೆ ಮೋದಿ ಭಾವಪೂರ್ಣ ನಮನ

ಮಕ್ಕಳೊಂದಿಗೆ ಬಂದ ದಂಪತಿ ಶಿವಕುಮಾರ ಶ್ರೀಗಳ ನಾಮಸ್ಮರಣೆ ಮಾಡಿ ಪಾವನರಾದರು. ಶಿವಕುಮಾರ ಶ್ರೀಗಳ ಜಯಂತಿಯಂದು ನಾಮಕರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಷ್ಟ್ರಪತಿಗಳ ಕಾರ್ಯಕ್ರಮದ ಭದ್ರತೆ ದೃಷ್ಟಿಯಿಂದ ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ – ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ

Share This Article