ಪಂಜಾಬ್ ಬಿಜೆಪಿ ಪ್ರಧಾನ ಕಚೇರಿ ಬಳಿ ಸ್ಫೋಟ ಪ್ರಕರಣ – ಐವರು ಅರೆಸ್ಟ್‌

1 Min Read

ಚಂಡೀಗಢ: ಇಲ್ಲಿನ (Chandigarh) ಬಿಜೆಪಿ (BJP) ಪ್ರಧಾನ ಕಚೇರಿಯ ಹೊರಗೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ (Punjab) ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಐದು ಜನರನ್ನು ಬಂಧಿಸಲಾಗಿದೆ. ಈ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ದುಷ್ಕರ್ಮಿಗಳನ್ನು ಗುರುತಿಸಲಾಗಿದೆ. ಇದುವರೆಗೆ ಒಂದು ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Explainer | ಹಾರ್ಮುಜ್‌ ಜಲಸಂಧಿಯಲ್ಲಿ ಸ್ಫೋಟಕ ಇರಿಸಿದ ಇರಾನ್‌ – ತೆಗೆದುಹಾಕಲು ಸಿದ್ಧ ಎಂದ ಜಪಾನ್‌; ಹೇಗೆ ಸಾಧ್ಯ?

ಪ್ರಾಥಮಿಕ ತನಿಖೆಯಲ್ಲಿ ಮಾಡ್ಯೂಲ್ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಬೆಂಬಲಿತವಾಗಿದೆ ಎಂದು ತಿಳಿದುಬಂದಿದೆ. ಪೋರ್ಚುಗಲ್ ಮತ್ತು ಜರ್ಮನಿಯಲ್ಲಿ ವಿದೇಶಿ ಮೂಲದ ನಿರ್ವಾಹಕರನ್ನು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಆರೋಪಿಗಳ ಬಂಧನದಿಂದ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ಭಯೋತ್ಪಾದಕ ಪಿತೂರಿಯನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ಮುಂದುವರೆದಿದೆ.

ಬುಧವಾರ (ಏ.1) ಸಂಜೆ 5 ಗಂಟೆ ಸುಮಾರಿಗೆ ಚಂಡೀಗಢದ ಸೆಕ್ಟರ್ 37ರಲ್ಲಿರುವ ಬಿಜೆಪಿ ಕಚೇರಿ ಬಳಿ ಸ್ಫೋಟ ಸಂಭವಿಸಿತ್ತು. ಶಂಕಿತ ಕಚ್ಚಾ ಸ್ಫೋಟಕ ಸಾಧನವನ್ನು ಕಚೇರಿಯ ಬಳಿ ಎಸೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

Share This Article