ಇರಾನ್‌ಗೆ ಉಳಿದಿರೋದು ಇನ್ನು 48 ಗಂಟೆ ಮಾತ್ರ: ಹಾರ್ಮುಜ್ ಓಪನ್ ಡೆಡ್‌ಲೈನ್ ನೆನಪಿಸಿದ ಟ್ರಂಪ್

1 Min Read

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿ (Strait of Hormuz) ಓಪನ್ ಮಾಡಿ. ಇಲ್ಲದಿದ್ದರೆ ಭಾರಿ ಅಪಾಯ ಕಾದಿದೆ. ನಿಮಗೆ 48 ಗಂಟೆಗಳ ಡೆಡ್‌ಲೈನ್ ಕೊಡ್ತೀನಿ ಎಂದು ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಾರ್ನಿಂಗ್ ಕೊಟ್ಟಿದ್ದಾರೆ.

‘ನಾನು ಇರಾನ್‌ಗೆ (Iran) ಒಪ್ಪಂದ ಮಾಡಿಕೊಳ್ಳಲು ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಹತ್ತು ದಿನಗಳ ಕಾಲಾವಕಾಶ ನೀಡಿದ್ದನ್ನು ನೆನಪಿಡಿ ಎಂದು ಎಚ್ಚರಿಕೆ ನೀಡಿ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇರಾನ್‌ ಯುದ್ಧ; 18,548 ಕೋಟಿ ಸಾಲ ವಾಪಸ್‌ ಕೊಡುವಂತೆ ಪಾಕಿಸ್ತಾನಕ್ಕೆ ಯುಎಇ ಒತ್ತಾಯ

ಇರಾನ್‌ಗೆ ಮಾರ್ಚ್ 26 ರಂದು ಟ್ರಂಪ್ ಡೆಡ್‌ಲೈನ್ ಕೊಟ್ಟಿದ್ದರು. ಇರಾನ್‌ನ ಕೋರಿಕೆಯ ಮೇರೆಗೆ ಡೆಡ್‌ಲೈನ್ ಮುಂದೂಡಲಾಗುವುದು ಎಂದು ಟ್ರಂಪ್ ಹೇಳಿದ್ದರು. ಆದರೆ, ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕದ ಪ್ರಸ್ತಾಪವನ್ನು ಇಸ್ಲಾಮಿಕ್ ಗಣರಾಜ್ಯವು ಏಕಪಕ್ಷೀಯ ನಿರ್ಧಾರ ಎಂದು ತಳ್ಳಿಹಾಕಿತ್ತು.

ಮಧ್ಯಪ್ರಾಚ್ಯ ಯುದ್ಧ ಶುರುವಾಗಿ ಒಂದು ತಿಂಗಳು ಮೇಲಾಯ್ತು. ಆದರೆ, ಯುದ್ಧ ನಿಲ್ಲುವ ಲಕ್ಷಣಗಳು ಸದ್ಯಕ್ಕಂತೂ ಇಲ್ಲ. ಇರಾನ್ ಮೇಲೆ ಇಸ್ರೇಲ್ ಜೊತೆಗೂಡಿ ಅಮೆರಿಕ ಜಂಟಿ ಸಮರ ಸಾರಿದರೂ `ಆಪರೇಷನ್ ಎಪಿಕ್ ಪ್ಯೂರಿ’ ಭಾರೀ ನಷ್ಟ ತಂದಿದೆ. ಯುದ್ಧ ಸಾರಿ ಇದೀಗ ಚಕ್ರವ್ಯೂಹದಲ್ಲಿ ಸಿಲುಕಿದೆ ವಿಶ್ವದ ದೊಡ್ಡಣ್ಣ. ಇರಾನ್‌ನ ಕ್ಷಿಪಣಿಗಳು ವಿಶ್ವದ ಮಹಾಶಕ್ತಿಯಾದ ಅಮೆರಿಕದ ಮೇಲೆ ಶಾಪದಂತೆ ಮಳೆ ಸುರಿಸುತ್ತಿವೆ. ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದುಕೊಂಡಿದ್ದ ಟ್ರಂಪ್‌ಗೆ ಇರಾನ್ ದೊಡ್ಡ ಹೊಡೆತ ಕೊಟ್ಟಿದೆ.

Share This Article