ಇರಾನ್‌ ಯುದ್ಧ; 18,548 ಕೋಟಿ ಸಾಲ ವಾಪಸ್‌ ಕೊಡುವಂತೆ ಪಾಕಿಸ್ತಾನಕ್ಕೆ ಯುಎಇ ಒತ್ತಾಯ

1 Min Read

ಇಸ್ಲಾಮಾಬಾದ್: ಇರಾನ್ (Iran) ಜೊತೆಗಿನ ಯುದ್ಧದ ಮಧ್ಯೆ, ಪಾಕಿಸ್ತಾನಕ್ಕೆ (Pakistan) ನೀಡಿದ್ದ 2 ಬಿಲಿಯನ್ ಡಾಲರ್‌ (18,548 ಕೋಟಿ ರೂ.) ಸಾಲ ಮರುಪಾವತಿಸುವಂತೆ ಯುಎಇ (UAE) ಒತ್ತಾಯಿಸಿದೆ.

ಪಾಕಿಸ್ತಾನ ಕೂಡ ಸಾಲ ಮರುಪಾವತಿಸಲು ಒಪ್ಪಿಕೊಂಡಿದೆ. ಪಾವತಿ ಬಾಕಿಯನ್ನು ಪೂರೈಸಲು ಯುಎಇ ಈ ನಿಧಿಯನ್ನು ಒದಗಿಸಿತ್ತು. ಇತ್ತೀಚಿನವರೆಗೂ ಅದನ್ನು ಜಾರಿಗೆ ತರಲಾಗುತ್ತಿತ್ತು. ಇದನ್ನೂ ಓದಿ: ಇರಾನ್‌ನ ಬುಶೆಹರ್‌ ಪರಮಾಣು ಸ್ಥಾವರದ ಮೇಲೆ ಯುಎಸ್‌-ಇಸ್ರೇಲ್‌ ದಾಳಿ; ಓರ್ವ ಸಾವು

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ನಂತರ ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಉಂಟಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಯುಎಇ ಹಣವನ್ನು ತಕ್ಷಣ ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಸಾಲದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‌ಬಿಪಿ) ನಲ್ಲಿ ಸುರಕ್ಷಿತ ಠೇವಣಿಯಾಗಿ ಇಡಲಾಗಿತ್ತು. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನವು 2 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಅಬುಧಾಬಿಗೆ ಹಿಂದಿರುಗಿಸಲಿದೆ ಎಂದು ಹೇಳಿದೆ.

ಪಾಕಿಸ್ತಾನವು ಈ ಮೊತ್ತದ ಮೇಲೆ ಸುಮಾರು ಶೇ.6 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ ಎಂದು ತಿಳಿದುಬಂದಿದೆ. ಹಿಂದೆ, ಯುಎಇ ವಾರ್ಷಿಕ ಆಧಾರದ ಮೇಲೆ ಠೇವಣಿಯನ್ನು ರೋಲ್ ಓವರ್ ಮಾಡುತ್ತಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನಕ್ಕೆ ಸುಮಾರು 12 ಶತಕೋಟಿ ಡಾಲರ್‌ಗಳಷ್ಟು ಬಾಹ್ಯ ಠೇವಣಿಗಳ ಅಗತ್ಯವಿತ್ತು. ಇದರಲ್ಲಿ ಸೌದಿ ಅರೇಬಿಯಾದಿಂದ 5 ಶತಕೋಟಿ ಡಾಲರ್, ಚೀನಾದಿಂದ 4 ಶತಕೋಟಿ ಡಾಲರ್ ಮತ್ತು ಯುಎಇ ಇರಿಸಿದ 3 ಶತಕೋಟಿ ಡಾಲರ್ ಸೇರಿವೆ. ಇದನ್ನೂ ಓದಿ: ಅಮೆರಿಕ ಜೊತೆ ಮಾತುಕತೆಗೆ ಇರಾನ್ ನಕಾರ – ಕದನ ವಿರಾಮಕ್ಕೆ ಎಳ್ಳುನೀರು

ಪಾಕಿಸ್ತಾನವು 21 ಶತಕೋಟಿ USD ಗಿಂತ ಹೆಚ್ಚಿನ ಮೀಸಲು ಹೊಂದಿದೆ. ಅದನ್ನು ಯುಎಇಗೆ ಮರುಪಾವತಿಸುತ್ತದೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಅದಕ್ಕೆ ಬಾಹ್ಯ ಹಣಕಾಸು ಬೇಕಾಗಬಹುದು.

Share This Article