ಶಾಸಕ ಶಿವಲಿಂಗೇಗೌಡ ಬಲಗೈ ಬಂಟನ ಪುತ್ರನಿಂದ ರೌಡಿಸಂ – ದಂಪತಿ ಮೇಲೆ ಮನಸ್ಸೋಯಿಚ್ಛೆ ಹಲ್ಲೆ ನಡೆಸಿ ಕ್ರೌರ್ಯ

2 Min Read

ಹಾಸನ: ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ಮೇಲೆ ಮನಸ್ಸೋಯಿಚ್ಛೆ ಹಲ್ಲೆ ನಡೆಸಿ ಶಾಸಕ ಕೆ.ಎಂ ಶಿವಲಿಂಗೇಗೌಡರ (Shivalinge Gowda) ಬಲಗೈ ಬಂಟನ ಪುತ್ರ ಸೂಫಿಯಾನ್ ಸಮಿವುಲ್ಲಾ ಕ್ರೌರ್ಯ ಮೆರೆದಿರುವ ಘಟನೆ ಅರಸೀಕೆರೆ (Arsikere) ಪಟ್ಟಣದಲ್ಲಿ ನಡೆದಿದೆ.

ದೇವಸ್ಥಾನಕ್ಕೆ (Temple) ತೆರಳಿ ವಾಪಸ್‌ ಬರುತ್ತಿದ್ದ ದಂಪತಿಯೊಂದಿಗೆ ಸಣ್ಣ ವಿಚಾರಕ್ಕೆ ಕಿರಿಕ್‌ ತೆಗೆದು ಹಲ್ಲೆ ನಡೆದ್ದಾನೆ. ಕೈಮುಗಿದು ಬೇಡಿಕೊಂಡರೂ ಬಿಡದೇ ತನ್ನ ಪುಂಡರ ಗ್ಯಾಂಗ್‌ ಕರೆಸಿ ರಕ್ತ ಬರುವಂತೆ ಥಳಿಸಿದ್ದಾನೆ. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಶಿರಸಿ| KSRTC-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ; 40 ಪ್ರಯಾಣಿಕರಿಗೆ ಗಾಯ

ಅಷ್ಟಕ್ಕೂ ನಡೆದಿದ್ದೇನು?
ದಂಪತಿಗಳಿಬ್ಬರು ಅರಸೀಕೆರೆ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಲು ಬಂದಿದ್ದರು. ರಥೋತ್ಸವ, ದೇವರ ಪೂಜೆ ಮುಗಿಸಿಕೊಂಡು ವಾಪಸ್‌ ತೆರಳುತ್ತಿದ್ದರು. ಈ ವೇಳೆ ತನ್ನ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಸಮಿವುಲ್ಲಾ ಅರಸೀಕೆರೆ ಪಟ್ಟಣದ ಎಪಿಎಂಸಿ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್‌ಗೆ ಟಚ್ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ಇದನ್ನೂ ಓದಿ:  ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ ಮಹಿಳೆಯ ಅತ್ಯಾಚಾರ

ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು ದಂಪತಿ ತೆರಳುತ್ತಿದ್ದ ಬೈಕ್‌ ಅಡ್ಡಗಟ್ಟಿ ಸೂಫಿಯಾನ್‌ ಸಮಿವುಲ್ಲಾ ವ್ಯಕ್ತಿಯನ್ನ ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾನೆ. ಇಷ್ಟಕ್ಕೂ ಸುಮ್ಮನಾಗದೇ ಫೋನ್‌ ಮಾಡಿ ತನ್ನ ಪುಂಡರ ಗ್ಯಾಂಗ್‌ ಕರೆಸಿ ಹಲ್ಲೆ ಮಾಡಿಸಿದ್ದಾನೆ, ಪತ್ನಿ ಕೈಮುಗಿದು ಬೇಡಿಕೊಂಡರೂ ಬಿಡದೇ ರಕ್ತ ಬರುಬಂತೆ ಹಲ್ಲೆ ಮಾಡಿದ್ದಾರೆ ಪುಂಡರು. ಅಮಾಯಕ ವ್ಯಕ್ತಿಗೆ ಥಳಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೊಲೀಸ್‌ ಠಾಣೆ ಎದುರು ಪ್ರತಿಭಟನೆ
ಇನ್ನೂ ಅಮಾಯಕ ದಂಪತಿ ಮೇಲೆ ಸೂಫಿಯಾನ್‌ ಮತ್ತವನ ಪಟಾಲಂನಿಂದ ಹಲ್ಲೆ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ನೂರಾರು ಸಂಖ್ಯೆಯ ಜನ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ದಂಪತಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.

Share This Article