ಯುದ್ಧದಿಂದ ಪಾಕಿಸ್ತಾನಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ – ಪೆಟ್ರೋಲ್‌ 458 ರೂ., ಡೀಸೆಲ್‌ 520 ರೂ.ಗಳಿಗೆ ಏರಿಕೆ

1 Min Read

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಯುದ್ಧ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಒಂದೆಡೆ ಜನ ಅಡುಗೆ ಮನೆಗೆ ಸಿಲಿಂಡರ್ ಸಿಗದೇ ಒದ್ದಾಡುತ್ತಿದ್ರೇ, ಮತ್ತೊಂದೆಡೆ ಪೆಟ್ರೋಲ್, ಡಿಸೇಲ್ ಸಿಗದೇ ವಾಹನದಲ್ಲಿ ಹಿಂದೂ ಮುಂದು ನೋಡುವಂತಾಗಿದೆ. ಮಧ್ಯಪ್ರಾಚ್ಯ ಯುದ್ಧದ ಬಿಸಿ ಈಗ ಪಾಕಿಸ್ತಾನಕ್ಕೂ (Pakistan)) ತಟ್ಟಿದ್ದು, ಪೆಟ್ರೋಲ್‌ ಬೆಲೆ ಶೇ.42.7 ರಷ್ಟು ಹಾಗೂ ಡೀಸೆಲ್‌ ಬೆಲೆ ಶೇ.54.9 ರಷ್ಟು ಏರಿಕೆ ಕಂಡಿದೆ.

ಇರಾನ್‌ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನಗಳು ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್‌ ದರ 151.88 ರೂ., ಡೀಸೆಲ್‌ ದರ 172.25 ರೂ. ಏರಿಕೆ (Petrol Diesel Prices Hike) ಕಂಡಿದೆ. ಇದರಿಂದ ಪ್ರತಿ ಲೀಟರ್‌ ಪೆಟ್ರೋಲ್‌ ದರ 458.40 ರೂಪಾಯಿ ಹಾಗೂ ಡೀಸೆಲ್‌ ದರ 520.35 ರೂ.ಪಾಯಿಗಳಿಗೆ ಏರಿಕೆಯಾಗಿದೆ ಎಂದು ದೇಶದ ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಫಾರ್ಮಾ ಕಂಪನಿಗಳಿಗೆ ಟ್ರಂಪ್‌ ಶಾಕ್‌ – ಬ್ರಾಂಡೆಡ್‌ ಔಷಧಗಳಿಗೆ 100% ಸುಂಕ

ಮುಂದುವರಿದು ಮಾತನಾಡಿ, ಸರ್ಕಾರವು ತನ್ನ ಬಜೆಟ್‌ನಲ್ಲಿ (Pakistan Budget) ಜನರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಪ್ರಯತ್ನಿ ಮಾಡಿದೆ. ಆದ್ರೆ ಸದ್ಯಕ್ಕೆ ಯುದ್ಧ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ, ಸಂಪನ್ಮೂಲ ಸೀಮಿತವಾಗಿ ಇರೋದ್ರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಫೆ.28 ರಂದು ಇರಾನ್‌ ಸರ್ವೋಚ್ಛ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯೊಂದಿಗೆ ಶುರುವಾದ ಯುದ್ಧವು 2 ತಿಂಗಳಿಗೆ ಕಾಲಿಟ್ಟಿದೆ. ಆದಾಗ್ಯೂ ಇರಾನ್‌ vs ಇಸ್ರೇಲ್‌-ಅಮೆರಿಕ ದೇಶಗಳ ನಡುವೆ ದಾಳಿ ಪ್ರತಿದಾಳಿ ಮುಂದುವರಿದಿದೆ. ಇದನ್ನೂ ಓದಿ: General Randy George| ಸೇನಾ ಮುಖ್ಯಸ್ಥನನ್ನೇ ಕಿತ್ತು ಹಾಕಿದ ಟ್ರಂಪ್‌ ಸರ್ಕಾರ – ರಾಜೀನಾಮೆಗೆ ಸೂಚನೆ

Share This Article