21 ವರ್ಷದ ಬಳಿಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

1 Min Read

ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ಹೆಚ್ಚುವರಿ ಸತ್ರ ನ್ಯಾಯಾಲಯ 21 ವರ್ಷದ ಬಳಿಕ ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೊಲೆ ಅಪರಾಧಿಯನ್ನು ಕನಕಗಿರಿ (Kanakagiri) ತಾಲೂಕಿನ ಪರಶುರಾಮ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹನುಮ ಜಯಂತಿ – ಅಂಜನಾದ್ರಿಗೆ ಆಗಮಿಸಿ ಮಾಲೆ ವಿಸರ್ಜಿಸಿದ ಭಕ್ತರು

21 ವರ್ಷಗಳ ಹಿಂದೆ ಪರಶುರಾಮ ಪತ್ನಿ ದುರಗಪ್ಪ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದ್ದಿದ್ದಳು. ಇದನ್ನು ತಿಳಿದ ಪರಶುರಾಮ್ ಆತನನ್ನು ಕೊಲೆ ಮಾಡಿ, ಪತ್ನಿಯ ಕೊಲೆಗೂ ಯತ್ನಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ದುರಗಪ್ಪ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದ. ಈ ಸಂಬಂಧ ಪರಶುರಾಮ್ ಪತ್ನಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಾಗಿ, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಬಳಿಕ 2004ರ ಜ.15ರಂದು ವಿಚಾರಣೆಗಾಗಿ ಕೊಪ್ಪಳ ನ್ಯಾಯಾಲಯಕ್ಕೆ ಕರೆತರುವಾಗ ಪರಾರಿಯಾಗಿದ್ದ. ಅದಾದ 21 ವರ್ಷಗಳ ಕಾಲ ವಿವಿಧ ಸ್ಥಳದಲ್ಲಿ ಹೆಸರು, ವೇಷ ಬದಲಿಸಿ ವಾಸ ಮಾಡುತ್ತಾ ತಲೆಮರೆಸಿಕೊಂಡಿದ್ದ.

ಕಳೆದ 5 ತಿಂಗಳ ಹಿಂದೆ ಪೊಲೀಸರು ಪರುಶುರಾಮನನ್ನು ಪತ್ತೆಹಚ್ಚಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದರು. ಇದೀಗ ಆ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ಬೇಸಿಗೆಯ ದಟ್ಟಣೆ ನಿರ್ವಹಣೆ; ಬೆಂಗಳೂರು ಕಂಟೋನ್ಮೆಂಟ್-ಚೆನ್ನೈ ನಡುವೆ ವಿಶೇಷ ರೈಲು ಸಂಚಾರ

Share This Article