ಮಾಸ್ಕೋ: ರಷ್ಯಾದ An-26 ಸೇನಾ ವಿಮಾನ ಪತನಗೊಂಡಿದ್ದು, 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ಮಂಗಳವಾರ (ಮಾ.31) ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಆಂಟೊನೊವ್ ಡಿಸೈನ್ ಬ್ಯೂರೋ An-26 ವಿಮಾನವು ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸಿತ್ತು. ಈ ವೇಳೆ ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡು ತಾಂತ್ರಿಕ ದೋಷದಿಂದಾಗಿ ಬಂಡೆಗೆ ಅಪ್ಪಳಿಸಿದೆ. ಪರಿಣಾಮ ವಿಮಾನದಲ್ಲಿದ್ದ 29 ಜನರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಮಾಹಿತಿ ಪ್ರಕಾರ ಆರು ಸಿಬ್ಬಂದಿ ಹಾಗೂ 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರೀಮಿಯಂ ಪೆಟ್ರೋಲ್ 160 ರೂ.ಗೆ ಏರಿಕೆ – ಜೆಟ್ ಇಂಧನ ಬೆಲೆ 2 ಲಕ್ಷ ರೂ.ಗೆ ಜಿಗಿತ
1960ರ ದಶಕದ ಅಂತ್ಯದಿಂದ ಸೇವೆ ಸಲ್ಲಿಸುತ್ತಿರುವ, ದಶಕಗಳಷ್ಟು ಹಳೆಯದಾದ An-26 ವಿಮಾನ ಸರಕು ಸಾಗಿಸಲು ಹಾಗೂ ಹೆಚ್ಚೆಂದರೆ 40 ಪ್ರಯಾಣಿಕರನ್ನು ಸಾಗಿಸಬಲ್ಲದಾಗಿತ್ತು. ಸದ್ಯ ವಿಮಾನ ಪತನಗೊಂಡ ಕ್ರೈಮಿಯಾ ಪರ್ಯಾಯ ದ್ವೀಪವನ್ನು 2014ರಲ್ಲಿ ಉಕ್ರೇನ್‌ನಿಂದ ರಷ್ಯಾ ವಶಪಡಿಸಿಕೊಂಡಿತ್ತು.
- ಇದಕ್ಕೂ ಮುನ್ನ 2022ರಲ್ಲಿ ಉಕ್ರೇನ್‌ನ ಜಪೋರಿಝಿಯಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
- 2020ರಲ್ಲಿ ಉಕ್ರೇನ್‌ನಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 27 ಜನರ ಪೈಕಿ ಓರ್ವ ವ್ಯಕ್ತಿ ಬದುಕುಳಿದಿದ್ದರು.
- 2020ರಲ್ಲಿ ದಕ್ಷಿಣ ಸುಡಾನ್‌ನಲ್ಲಿ ಅಪಘಾತಕ್ಕೀಡಾಗಿ ಐದು ರಷ್ಯನ್ನರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.
- 2017ರಲ್ಲಿ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಲ್ಯಾಂಡ್ ಆಗುವಾಗ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 10 ಜನರ ಪೈಕಿ ನಾಲ್ವರು ಸಾವನ್ನಪ್ಪಿದ್ದರು.ಇದನ್ನೂ ಓದಿ: ನಟಿಯಿಂದ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್

