ಇಂದಿನಿಂದ ಬೆಂಗಳೂರಿನಲ್ಲಿ ನೀರಿನ ಶುಲ್ಕ 3% ಹೆಚ್ಚಳ

1 Min Read

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು (BWSSB) ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಲಮಂಡಳಿ ಪ್ರತಿ ವರ್ಷದಂತೆ ಆರ್ಥಿಕ ಸಮತೋಲನವನ್ನ ಸರಿದೂಗಿಸಲು ಶೇ.3 ರಷ್ಟು ನೀರಿನ ಶುಲ್ಕ (Water Toll) ಹೆಚ್ಚಿಸಿದೆ.

ಈ ತಿಂಗಳ ಬಿಲ್‌ನಿಂದಲೇ ದರ ಅನ್ವಯವಾಗಲಿದೆ. ಪರಿಣಾಮ ಏಪ್ರಿಲ್‌ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್‌ ಬರುವ ಸಾಧ್ಯತೆಗಳಿವೆ. ಪರಿಷ್ಕೃತ ದರ ಹಿನ್ನೆಲೆ ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಸುಮಾರು ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ.

ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್‌ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್‌ ಹೆಚ್ಚಳ ಮಾಡಲಾಗುತ್ತಿದೆ.

ಸಾಮಾನ್ಯ ಬಳಕೆದಾರರಿಗೆ ನೀರಿನ ದರ ಏರಿಕೆ ಎಷ್ಟು?

– 8 ಸಾವಿರ ಲೀ. ಒಳಗಿನ ಬಳಕೆದಾರರಿಗೆ ಲೀಗೆ 0.15 ಪೈಸೆ
– 8 ಸಾವಿರದಿಂದ 25 ಸಾವಿರ ಲೀ. ಬಳಕೆದಾರರಿಗೆ ಪ್ರತಿ ಲೀಟರ್ ಗೆ 0.30 ಪೈಸೆ
– 25 ರಿಂದ 50 ಸಾವಿರ ಲೀ. ಬಳಕೆದಾರರಿಗೆ ಲೀಟರ್ ಗೆ 0.80 ಪೈಸೆ
– 50 ಸಾವಿರದಿಂದ 1 ಲಕ್ಷ ಲೀ. ಬಳಕೆದಾರರಿಗೆ ಲೀಟರ್ ಗೆ 1 ಪೈಸೆ

ವಾಣಿಜ್ಯ ಬಳಕೆದಾರರಿಗೆ ನೀರಿನ ದರ ಏರಿಕೆ ಎಷ್ಟು?

– 10 ಸಾವಿರ ಲೀಟರ್ ಒಳಗಿನವರಿಗೆ ಲೀ 1 ಪೈಸೆ
– 10 ರಿಂದ 25 ಸಾವಿರ ಲೀಟರ್ ಗೆ 1.30 ಪೈಸೆ.
– 25 ರಿಂದ 50 ಸಾವಿರ ಲೀಟರ್ 1.50 ಪೈಸೆ
– 50 ರಿಂದ 75 ಸಾವಿರ ಲೀ ಬಳಕೆದಾರರಿಗೆ 1.90 ಪೈಸೆ ಏರಿಕೆ ಸಾಧ್ಯತೆ

Share This Article