ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ – ಎಷ್ಟು ಇತ್ತು? ಎಷ್ಟು ಏರಿಕೆ?

1 Min Read

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಸಂಚಾರ ದುಬಾರಿಯಾಗಲಿದೆ. ಏಪ್ರಿಲ್‌ 1 ರಿಂದ 3% ರಷ್ಟು ಟೋಲ್ ದರ (Toll Price) ಹೆಚ್ಚಳವಾಗಲಿದೆ.

ಟೋಲ್ ದರ 5 ರೂ.ನಿಂದ 25 ರೂ.ವರೆಗೆ ಹೆಚ್ಚಳ ಮಾಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಕಟಣೆ ಹೊರಡಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ 118 ಕಿ.ಮೀ. ರಸ್ತೆಯಲ್ಲಿ ರಾಮನಗರದ ಕಣಮಿಣಕಿ ಹಾಗೂ ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಕಣಿಮಿಣಿಕೆ ಟೋಲ್‌ನಿಂದ ನಿಡಘಟ್ಟದವರೆಗೆ ದರ ಹೆಚ್ಚಳ ವಿವರ ಇಲ್ಲಿ ನೀಡಲಾಗಿದೆ
ಕಾರು/ಜೀಪು:- ಹಿಂದಿನ ದರ 175 ರೂ.
ಹೊಸ ದರ 180 ರೂ. (5 ರೂ. ಹೆಚ್ಚಳ)

ಲಘುವಾಹನ:- ಹಿಂದಿನ ದರ 280 ರೂ.
ಹೊಸ ದರ 285 ರೂ. (5 ರೂ. ಹೆಚ್ಚಳ)

ಟ್ರಕ್/ಬಸ್ :- ಹಿಂದಿನ ದರ 585 ರೂ.
ಹೊಸದರ 600 ರೂ. (15 ರೂ. ಹೆಚ್ಚಳ) ಇದನ್ನೂ ಓದಿ: ನೀವು ಕ್ಯಾಶ್‌ನಲ್ಲಿ ವ್ಯವಹಾರ ಮಾಡ್ತೀರಾ? ಹಾಗಿದ್ರೆ ಹೊಸ ಬದಲಾವಣೆ ಓದಿ – ಇಲ್ದಿದ್ರೆ ಬೀಳುತ್ತೆ ಭಾರೀ ದಂಡ


ವಾಣಿಜ್ಯ ವಾಹನ:- ಹಿಂದಿನ ದರ 640 ರೂ.
ಹೊಸ ದರ 655 ರೂ.(20 ರೂ. ಹೆಚ್ಚಳ)

ಭಾರಿ ವಾಹನ:- ಹಿಂದಿನ ದರ 920 ರೂ.
ಹೊಸ ದರ 940 ರೂ.(20 ರೂ. ಹೆಚ್ಚಳ) ಇದನ್ನೂ ಓದಿ: ಆದಾಯ ತೆರಿಗೆ ಪದ್ದತಿಯಲ್ಲಿ ಏನು ಬದಲಾವಣೆ? ಇಲ್ಲಿದೆ ಪೂರ್ಣ ವಿವರ

ಮಲ್ಟಿ ಆಕ್ಸಲ್ ವಾಹನ:- ಹಿಂದಿನ ದರ 1,120 ರೂ.
ಹೊಸ ದರ 1,145 ರೂ. (25 ರೂ. ಹೆಚ್ಚಳ)

Share This Article