ಟೆಹ್ರಾನ್/ವಾಷಿಂಗ್ಟನ್: ಅಮೆರಿಕ – ಇಸ್ರೇಲ್ (US Israel), ಇರಾನ್ ವಿರುದ್ಧ ತನ್ನ ಪ್ರತೀಕಾರ ಮುಂದುವರಿಸಿವೆ. ಇರಾನ್ನ ಇಸ್ಪಹಾನ್ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು 907 ಕೆಜಿ ಬಂಕರ್ ಬಸ್ಟರ್ ಬಾಂಬ್ಗಳಿಂದ (Bunker Buster Bomb) ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊವೊಂದನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ (Isfahan City) ಈ ಸ್ಫೋಟ ಸಂಭವಿಸಿದೆ. ಈ ದೃಶ್ಯಾವಳಿಗಳು ಸರಣಿ ಸ್ಫೋಟ ಸಂಭವಿಸುವುದನ್ನು ತೋರಿಸುತ್ತದೆ. ದಾಳಿಯ ತೀವ್ರತೆಯು ಮುಗಿಲೆತ್ತರಕ್ಕೆ ಚಿಮ್ಮುವ ಬೆಂಕಿಯಿಂದಲೇ ತಿಳಿಯುತ್ತದೆ. ಇದನ್ನೂ ಓದಿ: ಅಮೆರಿಕ ಏರ್ಸ್ಟ್ರೈಕ್ – ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ತೆರಳುತ್ತಿದ್ದ ವಿಮಾನಕ್ಕೆ ಹಾನಿ
🚨 BREAKING: President Trump just posted a video of MASSIVE explosions in Isfahan, Iran following what’s believed to be U.S.-Israeli airstrikes
We clearly hit something pretty big… pic.twitter.com/3rg7aGkeEF
— Nick Sortor (@nicksortor) March 31, 2026
ಟ್ರಂಪ್ ಈ ವೀಡಿಯೊ ಬಗ್ಗೆ ಯಾವುದೇ ನಿಖರ ಮಾಹಿತಿ ಉಲ್ಲೇಖಿಸಿಲ್ಲ. ಆದ್ರೆ ಇದು ಇರಾನ್ನ (Iran) ಇಸ್ಫಹಾನ್ ನಗರದಲ್ಲಿರುವ ಬದ್ರ್ ಮಿಲಿಟರಿ ವಾಯುನೆಲೆಯ ಮೇಲೆ ಅಮೆರಿಕ – ಇಸ್ರೇಲ್ ನಡೆಸಿದ ಜಂಟಿ ದಾಳಿ ಎಂದು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.
ಒಂದು ದಿನದ ಹಿಂದಷ್ಟೇ ಅಧ್ಯಕ್ಷ ಟ್ರಂಪ್ ಅವರು ಇರಾನ್ಗೆ ಎಚ್ಚರಿಕೆ ನೀಡಿದ್ದರು. ಇರಾನ್ ಒಂದು ವೇಳೆ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಶೀಘ್ರವೇ ಬರದಿದ್ದರೆ, ಆ ದೇಶದ ಇಂಧನ ಮೂಲಗಳು, ಪರಮಾಣು ಕೇಂದ್ರಗಳು ಮತ್ತು ನೀರು ಸರಬರಾಜು ಘಟಕಗಳೂ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನೂ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ನೀರು, ವಿದ್ಯುತ್, ಟೋಲ್ ದರ ಏರಿಕೆ – ಏ.1ರಿಂದ ಜನರ ಜೀವನ ದುಬಾರಿ
ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರದಲ್ಲಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಪದೇ ಪದೇ ಆರೋಪಿಸುತ್ತಿವೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಣಾವಲು ಸಂಸ್ಥೆಯು ಈ ಆರೋಪವನ್ನು ಇನ್ನು ಪುಷ್ಟಿಕರಿಸಿಲ್ಲ. ಕಳೆದ ವರ್ಷವೂ ಇರಾನ್ನ ಕೆಲವು ಪ್ರಮುಖ ಕೇಂದ್ರಗಳ ಮೇಲೆ ಟ್ರಂಪ್ ದಾಳಿ ನಡೆಸಿದ್ದರು. ಈಗಿನ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

