ನಿಂತಿದ್ದ ಆಟೋ ಜಖಂಗೊಳಿಸಿ ಓಡಿಹೋದ ಪುಂಡಾನೆ – ಮೊಬೈಲ್‌ನಲ್ಲಿ ವೀಡಿಯೋ ಸೆರೆ

1 Min Read

ಹಾಸನ: ಮನೆಯ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಪುಂಡಾನೆಯೊಂದು (Elephant) ದಾಳಿ ಮಾಡಿ ಜಖಂಗೊಳಿಸಿದ ಘಟನೆ ಬೇಲೂರು (Beluru) ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯ ವೀಡಿಯೋ ಆಟೋ ಮಾಲೀಕನ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿದೆ. ಇಂದು (ಮಾ.30) ಬೆಳಗ್ಗೆ ಮನೆಯ ಬಳಿ ಬಂದ ಒಂಟಿಸಲಗ ನಿಂತಿದ್ದ ಆಟೋ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ಆಟೋ ಜಖಂಗೊಂಡಿದೆ. ದಾಳಿ ಬಳಿಕ ಕಾಫಿ ತೋಟದೊಳಗೆ ಕಾಡಾನೆ ಓಡಿಹೋಗಿದೆ. ಇದನ್ನೂ ಓದಿ: ಪಟ್ಲ ಬೆಟ್ಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು – ಪ್ರವಾಸಿಗರಿಗೆ ನಿಷೇಧ

ಕಳೆದ ಒಂದು ವಾರದಿಂದ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಉಳಿದುಕೊಂಡಿವೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

Share This Article