ಅಮೆರಿಕದ 2800 ಕೋಟಿ ಮೌಲ್ಯದ ʻಆಕಾಶದ ಕಣ್ಣʼನ್ನೇ ಕಿತ್ತ ಇರಾನ್‌ – ವಿಮಾನ 2 ಹೋಳು

2 Min Read

ಟೆಹ್ರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ಬಗ್ಗದ ಇರಾನ್ (Iran) ತನ್ನ ಪ್ರತೀಕಾರದ ದಾಳಿ ಮುಂದುವರೆಸಿದೆ. ಇರಾನ್ ಅಮೆರಿಕದ 300 ಮಿಲಿಯನ್‌ ಡಾಲರ್‌(ಅಂದಾಜು 2,845 ಕೋಟಿ ರೂ.) ಮೌಲ್ಯದ ಇ-3 ಸೆಂಟ್ರಿ ಅವ್ಯಾಕ್ಸ್ ಏರ್‌ಕ್ರಾಫ್ಟ್‌ ಧ್ವಂಸಗೊಳಿಸಿದೆ.

ಸೌದಿ ಅರೇಬಿಯಾದ(Saudi Arabia) ಪ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್‌ ಹಾರಿಸಿ ದಾಳಿ ನಡೆಸಿ ಕಣ್ಗಾವಲು ವಿಮಾನವನ್ನು ಹೊಡೆದು ಹಾಕಿದೆ. ಪ್ರಕಟವಾದ ಚಿತ್ರದಲ್ಲಿ ವಿಮಾನ ಎರಡು ಹೋಳಾಗಿದೆ. ಈ ದಾಳಿಯಲ್ಲಿ ಅಮೆರಿಕದ 10 ಸೈನಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ ದಾಳಿಯಲ್ಲಿ ಬಹು ಇಂಧನ ತುಂಬುವ ವಿಮಾನಗಳು ಸಹ ಹಾನಿಗೊಳಗಾಗಿವೆ. ಈ ಘಟನೆಯ ಬಗ್ಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸಂಕಷ್ಟದ ಸಮಯದಲ್ಲಿ ಭಾರತದಿಂದ 38 ಸಾವಿರ MT ತೈಲ ಪೂರೈಕೆ – ಧನ್ಯವಾದ ಹೇಳಿದ ಶ್ರೀಲಂಕಾ


ಈ ವಿಮಾನದ ವಿಶೇಷತೆ ಏನು?
ಬೋಯಿಂಗ್ E-3 ಸೆಂಟ್ರಿ (E-3 Sentry) ಎಂಬುದು ಒಂದು ಅತ್ಯಾಧುನಿಕ ಮಿಲಿಟರಿ ವಿಮಾನವಾಗಿದ್ದು, ಇದನ್ನು ಸಾಮಾನ್ಯವಾಗಿ AWACS (Airborne Warning and Control System) ಎಂದು ಕರೆಯಲಾಗುತ್ತದೆ.

E-3 ಸೆಂಟ್ರಿಗೆ ಹಾರುವ ನಿಯಂತ್ರಣ ಕೊಠಡಿ ಎಂಬ ಹೆಸರೂ ಇದೆ. ಯುದ್ಧದ ಸಮಯದಲ್ಲಿ ಶತ್ರು ವಿಮಾನಗಳು ಅಥವಾ ಕ್ಷಿಪಣಿಗಳನ್ನು ದೂರದಿಂದಲೇ ಗುರುತಿಸಲು ಮತ್ತು ತನ್ನ ದೇಶದ ವಿಮಾನಗಳಿಗೆ ಮಾರ್ಗದರ್ಶನ ನೀಡಲು ಇದನ್ನು ಬಳಸಲಾಗುತ್ತದೆ.


ಈ ವಿಮಾನದ ಬೆನ್ನಿನ ಮೇಲೆ ಒಂದು ದೊಡ್ಡ ತಿರುಗುವ ತಟ್ಟೆಯಂತಹ(Radar Dome) ಭಾಗವಿರುತ್ತದೆ. ಇದು ಸುಮಾರು 400 ಕಿಲೋಮೀಟರ್‌ಗಿಂತಲೂ ದೂರದಲ್ಲಿರುವ ಶತ್ರುಗಳ ಚಲನವಲನವನ್ನು ಪತ್ತೆಹಚ್ಚಬಲ್ಲದು. ಇದನ್ನೂ ಓದಿ: ಇರಾನ್‌ ಮೇಲೆ ರಣಭೀಕರ ದಾಳಿಗೆ ಪ್ಲ್ಯಾನ್‌ – ಮಧ್ಯಪ್ರಾಚ್ಯಕ್ಕೆ 3,500 ನೌಕಾಪಡೆ, ಟ್ರಿಪೋಲಿ ನಿಯೋಜಿಸಿದ ಅಮೆರಿಕ

ಮುಖ್ಯವಾಗಿ ಅಮೆರಿಕದ ವಾಯುಪಡೆ (USAF) ಮತ್ತು ಬ್ರಿಟನ್, ಫ್ರಾನ್ಸ್‌ನಂತಹ ದೇಶಗಳು ಬಳಸುತ್ತವೆ. ಯಾವುದೇ ಹವಾಮಾನದಲ್ಲೂ ಇದು ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.

ಬೋಯಿಂಗ್ 707 ಎಂಬ ಪ್ರಯಾಣಿಕ ವಿಮಾನದ ಮಾದರಿಯನ್ನು ಆಧರಿಸಿ E-3 ಸೆಂಟ್ರಿಯನ್ನು ನಿರ್ಮಿಸಲಾಗಿದೆ. ಯುದ್ಧಭೂಮಿಯಲ್ಲಿ ಆಕಾಶದಿಂದಲೇ ಕಣ್ಗಾವಲು ಇಡುವ ಮತ್ತು ತನ್ನ ಸೈನ್ಯಕ್ಕೆ ಆಜ್ಞೆಗಳನ್ನು ನೀಡುವ ಕಾರಣ ಈ ವಿಮಾನವನ್ನು ಡಿಫೆನ್ಸ್‌ ತಜ್ಞರು ಶಕ್ತಿಯುತ ʼಆಕಾಶದ ಕಣ್ಣುʼ ಎಂಬ ಹೆಸರಿನಿಂದ ಕರೆಯುತ್ತಾರೆ.

Share This Article