ತಗ್ಗದ ವಾಣಿಜ್ಯ ಸಿಲಿಂಡರ್ ಅಭಾವ – ಭಾನುವಾರದ ಬಾಡೂಟಕ್ಕೂ ʻಗ್ಯಾಸ್‌ ಟ್ರಬಲ್‌ʼ

1 Min Read

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ (Commercial Cylinder) ಅಭಾವ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸಂಡೇ ಬಾಡೂಟಕ್ಕೂ ತಟ್ಟಿದ ಗ್ಯಾಸ್ ಟ್ರಬಲ್ ತಟ್ಟಿದೆ.

ಗ್ರಾಹಕರಿಗೆ ಬಾಡೂಟ (Nonveg Meals) ನೀಡಲು ಹೋಟೆಲ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಯಶವಂತಪುರದಲ್ಲಿರೋ ಹೋಟೆಲ್ ಆಸರೆಯಲ್ಲಿ ಹೊಸ ಕಿಚನ್ ಸೆಟ್ ಆಪ್ ಮಾಡಿ ಅಡುಗೆ ತಯಾರಿ ಮಾಡಲಾಗ್ತಿದೆ. ಇದನ್ನೂ ಓದಿ: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್‌: ಸಚಿವ ಕೆ.ಹೆಚ್‌ ಮುನಿಯಪ್ಪ

ಹೋಟೆಲ್ ಮಾಲೀಕರು 5 ದೊಡ್ಡ ಸೌದೆ ಒಲೆ ಹಾಕಿ ಖಾದ್ಯಗಳ ತಯಾರಿ ಮಾಡಿದ್ದಾರೆ. ಇನ್ನು ಮಹಾಲಕ್ಷ್ಮಿ ಲೇಔಟ್ ಆದಿತ್ಯ ಹೊಟೇಲ್‌ನಲ್ಲಿಯೂ ಸಿಲಿಂಡರ್ ಸಮಸ್ಯೆ ಎದುರಾಗಿದೆ.

ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಬಳಸಿ ಹೋಟೆಲ್ ಮಾಲೀಕರು ಅಡುಗೆ ತಯಾರಿಸಿದ್ದಾರೆ. ಇನ್ನು ರಾಜಾಜಿನಗರದಲ್ಲಿರುವ ರಾಜಣ್ಣ ಮಿಲಿಟರಿ ಹೋಟೆಲ್‌ನಲ್ಲಿಯೂ ಗ್ಯಾಸ್ ಸಿಲಿಂಡರ್ ಗೋಳು ಮುಂದುವರಿದಿದೆ. ಇದನ್ನೂ ಓದಿ: ಕಂಟೇನರ್ ಲಾರಿ, ಕಾರು ನಡುವೆ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಕಾರು

Share This Article