ಕಠ್ಮಂಡು: ಜೆನ್ ಝಿ (Gen-Z) ಗಲಭೆಯಿಂದ ಸರ್ಕಾರ ಪತನವಾಗಿದ್ದ ನೇಪಾಳಕ್ಕೆ (Nepal) 47ನೇ ಪ್ರಧಾನಿಯಾಗಿ ಮಾಜಿ ರ‍್ಯಾಪರ್ ಬಾಲೇಂದ್ರ ಶಾ (Balendra Shah) ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ನಿಟ್ಟೆ ಮೀನಾಕ್ಷಿ ವಿವಿಯಲ್ಲಿ ಬಾಲೇಂದ್ರ ಶಾ ಶಿಕ್ಷಣ ಪಡೆದಿದ್ದು, 35ನೇ ವಯಸ್ಸಿಗೆ ಪ್ರಧಾನಿಯಾಗುವ ಮೂಲಕ ನೇಪಾಳದ ಅತ್ಯಂತ ಕಿರಿಯ ಪ್ರಧಾನಿ (Prime Minister) ಎಂಬ ಹೆಗ್ಗಳಿಕೆಗೆ ಬಾಲೇನ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ – ಅಮೆರಿಕ Vs ಇರಾನ್ ಯುದ್ಧಕ್ಕೆ ಯೆಮನ್ ಎಂಟ್ರಿ – ಇಸ್ರೇಲ್ ಮೇಲೆ ಫಸ್ಟ್ ಟೈಂ ಮಿಸೈಲ್ ದಾಳಿ
ಗುರುವಾರ ಬಾಲೇಂದ್ರ ಶಾ ಅವರನ್ನು ರಾಷ್ಟ್ರೀಯ ಸ್ವತಂತ್ರ ಪಕ್ಷವು ತನ್ನ ಸಂಸದೀಯ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಪಕ್ಷದ ಅಧ್ಯಕ್ಷೆ ರಬಿ ಲಮಿಚಾನೆ ಅವರು ಈ ಹುದ್ದೆಗೆ ಶಾ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸರ್ವಾನುಮತದ ಅನುಮೋದನೆ ದೊರಕಿತ್ತು. ಇದನ್ನೂ ಓದಿ: ಲಾರಿಗೆ ಬೈಕ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ದುರ್ಮರಣ
ಇತ್ತೀಚೆಗೆ ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಪಿ (RSP) ಪಕ್ಷವು ಒಟ್ಟು 275 ಸ್ಥಾನಗಳಲ್ಲಿ 182ರಲ್ಲಿ ಭರ್ಜರಿ ಗೆಲುವು ಸಾಧಿಸಿ ಬಹುಮತ ಪಡೆದಿತ್ತು. ನೇಪಾಳದಲ್ಲಿ ಈ ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ವಿರೋಧಿಸಿ ಜೆನ್ ಝಿ ಹೋರಾಟ ನಡೆಸಿತ್ತು. ಇದನ್ನೂ ಓದಿ: CSK ಫ್ಯಾನ್ಸ್‌ಗೆ ಶಾಕ್ – ಐಪಿಎಲ್ 2026ರ ಮೊದಲೆರಡು ವಾರಗಳಲ್ಲಿ ಧೋನಿ ಆಡೋದು ಡೌಟ್
ಚುನಾವಣೆಯಲ್ಲಿ ಶಾ ಅಲಿಯಾಸ್ ಬಾಲೇನ್ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆಪಿ ಶರ್ಮಾ ಒಲಿ ಅವರನ್ನು ಪರಾಜಯಗೊಳಿಸಿ ಗೆಲುವು ಸಾಧಿಸಿದ್ದರು. ನೇಪಾಳ ಚುನಾವಣೆಯಲ್ಲಿ ಆರ್‌ಎಸ್‌ಪಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು. ಇದನ್ನೂ ಓದಿ: ಬೆಂಗಳೂರಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತ; ಅಪ್ಪ-ಅಮ್ಮ, 4 ವರ್ಷದ ಮಗು ಸ್ಥಳದಲ್ಲೇ ಸಾವು
ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಯುವಕರು ನಡೆಸಿದ ದಂಗೆಯನ್ನು ನಿಯಂತ್ರಿಸಲಾಗದೆ, ನೇಪಾಳ ಸರ್ಕಾರವು ಪತನಗೊಂಡಿತ್ತು. ಅದಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಸೋಲಿಸಿರುವ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ; ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ


