ಕರ್ನಾಟಕ, ತಮಿಳುನಾಡಿಗೆ ಕಳುಹಿಸಿಲ್ಲ ಯಾಕೆ? ಗುಜರಾತಿಗೆ ಯಾಕೆ ತೈಲ ಟ್ಯಾಂಕರ್‌ ಹೋಗಬೇಕಿತ್ತು?- ಡಿಕೆಶಿ ಕಿಡಿ

2 Min Read

– ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಬೇರೆ ರೀತಿ ನೋಡುತ್ತಿದೆ
– ಮೋದಿ ಸರ್ಕಾರದಿಂದ 43 ಲಕ್ಷ ಕೋಟಿ ಲೂಟಿ

ಬೆಂಗಳೂರು: ದಕ್ಷಿಣ ಭಾರತವನ್ನು(South India) ಕೇಂದ್ರ ಸರ್ಕಾರ ಬೇರೆ ರೀತಿ ನೋಡುತ್ತಿದೆ. ಭಾರತಕ್ಕೆ ಬಂದ ತೈಲ ಟ್ಯಾಂಕರ್‌ ಗುಜರಾತಿಗೆ(Gujarat) ಯಾಕೆ ಹೋಗಬೇಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪ್ರಶ್ನಿಸಿ ಸಿಟ್ಟು ಹೊರಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತಿಗೆ ಯಾಕೆ ತೈಲ ಟ್ಯಾಂಕರ್‌ ಹೋಗಿದ್ದು? ಕರ್ನಾಟಕ, ಕೇರಳ, ತಮಿಳುನಾಡಿಗೆ ನೀಡಬೇಕಿತ್ತಲ್ಲ. ದಕ್ಷಿಣ ಭಾರತದಲ್ಲಿ ಅವರ ಸರ್ಕಾರ ಇಲ್ಲ ಎಂಬ ಕಾರಣಕ್ಕೆ ಉತ್ತರ ಭಾರತಕ್ಕೆ (North India) ನೀಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರದ ನಿರ್ಧಾರದಿಂದ ಇಂದು ಒಂದೇ ದಿನ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ 87 ಸಾವಿರ ಕೋಟಿ ಕುಸಿತ


ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ ತೈಲ ಟ್ಯಾಂಕರ್ ಸಿಲಿಂಡರ್ ಪೂರೈಕೆ ನೀಡಬೇಕಿತ್ತು. ನಾವಿಲ್ಲಿ ಹೊಟೇಲುಗಳಲ್ಲಿ ಅಡುಗೆ ಮನೆಗಳಲ್ಲಿ ಒಲೆ ಹೊತ್ತಿಸುವುದಕ್ಕೂ ಒದ್ದಾಡುತ್ತಿದ್ದೇವೆ. ದಕ್ಷಿಣ ಭಾರತವನ್ನು ಬೇರೆ ರೀತಿ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?

ಅಬಕಾರಿ ಸುಂಕವನ್ನುಕಡಿಮೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ(Randeep Surjewala) ಕೇಂದ್ರ ಸರ್ಕಾರ 43 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ತೈಲ ಬೆಲೆ ಏರಿಸುತ್ತಿದೆ, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡ್ತಿದೆ: ಡಿಕೆಶಿ 

ಸುಂಕ ಕಡಿಮೆ ಮಾಡಿದ್ದರಿಂದ ರಾಜ್ಯದ ಜನತೆಗೆ ನಯಾ ಪೈಸೆಯೂ ಲಾಭ ಇಲ್ಲ. ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ಕಂಪನಿಗಳಿಗೆ ಸರ್ಕಾರ ನೀಡುತ್ತಿದೆ ಎಂದು ಕಿಡಿಕಾರಿದರು.

Share This Article