ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ – 23 ಜನ ಸಾವು, ಹಲವರು ಮಿಸ್ಸಿಂಗ್‌

1 Min Read

ಢಾಕಾ: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಾರಿಗೆ ಬೋಟ್‌ ಏರುವ ವೇಳೆ ನದಿಗೆ ಉರುಳಿಬಿದ್ದ (Bus Falls Into River) ಪರಿಣಾಮ ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದ (Bangladesh) ರಾಜಧಾನಿಯಲ್ಲಿ ನಡೆದಿದೆ.

ಬುಧವಾರ ಸಂಜೆ 5:15 ಗಂಟೆ ಸುಮಾರಿಗೆ ನೈಋತ್ಯ ಜಿಲ್ಲೆ ರಾಜ್‌ಬರಿಯಿಂದ ಪ್ರಯಾಣಿಸುತ್ತಿದ್ದ ಬಸ್ ಸಾರಿಗೆ ಬೋಟ್‌ (Transport Ferry) ಏರುವಾಗ ಅಪಘಾತ ಸಂಭವಿಸಿದೆ. ಹಲವಾರು ಪ್ರಯಾಣಿಕರು ಬಸ್‌ ಕಿಟಕಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಬಹುತೇಕರು ಒಳಗಡೆಯೇ ಲಾಕ್‌ ಆಗಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ – ವಿಪಕ್ಷಗಳಿಗೆ ಜೈಶಂಕ‌ರ್ ತಿರುಗೇಟು

ಬಸ್‌ ಸಾರಿಗೆ ಬೋಟ್‌ ಏರುತ್ತಿದ್ದಾಗ ʻಪದ್ಮಾʼ ನದಿಗೆ ಬಿದ್ದಿದೆ. ಈವರೆಗೆ 23 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಳಿಕ ಸಾಲ್ವೆಜ್‌ ಬೋಟ್‌ನಲ್ಲಿದ್ದ ಕ್ರೇನ್‌ಗಳನ್ನ ಬಳಸಿಕೊಂಡು ಬಸ್‌ ಅನ್ನು ಹೊರತೆಗೆಯಲಾಯಿತು. ಇದಾದ ಬಳಿಕ ಬುಧವಾರ ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು (ಗುರುವಾರ) ಮತ್ತೆ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ಸೇವೆ, ನೌಕಾಪಡೆ, ಪೊಲೀಸ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿವೆ ಎಂದು ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು ಟ್ರಂಪ್‌ ಹಾಕಿರೋ 15 ಅಂಶಗಳ ಅಜೆಂಡಾ ಏನು..? – ಸಂಧಾನ ಮಾತುಕತೆಗೆ 1 ತಿಂಗಳ ಕದನ ವಿರಾಮ

Share This Article