ಮುಂಬೈ: ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕ, ರ‍್ಯಾಪರ್ ಬಾದ್‌ಶಾ (Badshah) ಮೊದಲ ಪತ್ನಿಯೊಂದಿಗೆ ವಿಚ್ಚೇದನ ಪಡೆದು 6 ವರ್ಷಗಳ ಬಳಿಕ ಖ್ಯಾತ ನಟಿಯೊಂದಿಗೆ ಎರಡನೇ ವಿವಾಹವಾಗಿದ್ದಾರೆ.
ಹೌದು, ಬಾದ್‌ಶಾ ಪಂಜಾಬಿ ನಟಿ ಇಶಾ ರಿಖಿಯನ್ನು (Isha Rikhi) ಎರಡನೇ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಸ್ವತಃ ಇಶಾ ರಿಖಿ ಅವರ ತಾಯಿ ಪೂನಂ ರಿಖಿ ಇವರಿಬ್ಬರ ಮದುವೆ ಫೋಟೋಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಾದ್‌ಶಾ ಹಾಗೂ ಇಶಾ ರಿಖಿ ಮದುವೆ ಫೋಟೋಸ್ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಈ ಕುರಿತು ಬಾದ್‌ಶಾ ಅಥವಾ ಇಶಾ ರಿಖಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಬಾದ್‌ಶಾ ಮತ್ತು ಇಶಾ ಸುಮಾರು 4 ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಬ್ಬರೂ ಪರಸ್ಪರ ಸ್ನೇಹಿತರ ಮೂಲಕ ಪಾರ್ಟಿಯಲ್ಲಿ ಭೇಟಿಯಾಗಿ ಕ್ರಮೇಣ ಸ್ನೇಹಿತರಾದರು.
View this post on Instagram
ಇಶಾ ರಿಖಿ 2013ರಲ್ಲಿ ಪಂಜಾಬಿ ಚಿತ್ರ ‘ಜಟ್ ಬಾಯ್ಸ್ ಪುಟ್ ಜಟ್ಟನ್ ದೇ’ ಮೂಲಕ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಬಾಲಿವುಡ್ ಚಿತ್ರ ನವಾಬ್ಜಾದೆಯಲ್ಲಿ ಕಾಣಿಸಿಕೊಂಡರು.
ಬಾದ್‌ಶಾ ಈ ಹಿಂದೆ ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಜೆಸ್ಸಿಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ. ಈ ದಂಪತಿ 2020ರಲ್ಲಿ ಡಿವೋರ್ಸ್ ಪಡೆದಿದ್ದರು. ಸದ್ಯ ಎರಡನೇ ಮದುವೆ ಬಗ್ಗೆ ಅಭಿಮಾನಿಗಳು ನವ ದಂಪತಿಯಿಂದ ಅಧಿಕೃತ ಹೇಳಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

