ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 5 ದಿನಗಳ ಕದನ ವಿರಾಮ(Iran Ceasefire) ಘೋಷಣೆಯನ್ನು ಪ್ರಕಟಿಸುವ ಮೊದಲೇ ಯಾರೋ ಹೂಡಿಕೆದಾರರು ಕಚ್ಚಾ ತೈಲದ (Crude Oil) ಹೂಡಿಕೆಯನ್ನು ಮಾರಿ S&P 500 ಫ್ಯೂಚರ್ನಲ್ಲಿ ಬೆಟ್ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಅಮೆರಿಕ ಕಾಲಮಾನ ಸೋಮವಾರ ಬೆಳಗ್ಗೆ 7:04ಕ್ಕೆ ಡೊನಾಲ್ಡ್ ಟ್ರಂಪ್ ಕದನ ವಿರಾಮ ಕುರಿತಾದ ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ಪ್ರಕಟಗೊಳ್ಳುವ 14 ನಿಮಿಷದ ಮೊದಲು ಯಾರೋ 192 ದಶಲಕ್ಷ ಡಾಲರ್ (ಅಂದಾಜು 1,800 ಕೋಟಿ ರೂ.) ಮೌಲ್ಯದ ಕಚ್ಚಾ ತೈಲ ಫ್ಯೂಚರ್ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲ ನಿಮಿಷಗಳಲ್ಲಿ S&P 500 ಫ್ಯೂಚರ್ನಲ್ಲಿ 1.5 ಶತಕೋಟಿ ಡಾಲರ್ ( ಅಂದಾಜು 14 ಸಾವಿರ ಕೋಟಿ ರೂ.) ಬೆಟ್ ಮಾಡಿದ್ದು ಈಗ ಭಾರೀ ಸಂಚಲನ ಮೂಡಿಸಿದೆ.
5 minutes before Trump’s announcement:
* $1.5B notional worth of S&P500 (ES) futures are bought in a single clip.
* $192M notional of oil futures (CL) sold.
More than 4x-6x any other trade size during the market close.
Insiders profited from his lies in broad daylight! pic.twitter.com/RhE3hiC0lj
— Adam Cochran (adamscochran.eth) (@adamscochran) March 23, 2026
ಯುದ್ಧ ಪ್ರಕಟವಾದ ನಂತರ ಕಚ್ಚಾ ತೈಲದ ಫ್ಯೂಚರ್ ಬೆಲೆಗಳು ಏರಿಕೆ ಆಗುತ್ತಿದ್ದರೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಾ ಬಂದಿದೆ. ಯಾವುದೇ ಮಹತ್ವದ ಘಟನೆಗಳು ನಡೆಯದ ಸಮಯದಲ್ಲಿ ಯಾರೂ ಧೈರ್ಯವಾಗಿ ಇಷ್ಟೊಂದು ಪ್ರಮಾಣದ ಹಣವನ್ನು ಹೂಡಿಕೆ ಮಾಡುವುದಿಲ್ಲ. ಅದರಲ್ಲೂ ಕಚ್ಚಾ ತೈಲದ ದರ 100 ಡಾಲರ್ ದಾಟಿದ ಸಮಯದಲ್ಲಿ ಒಮ್ಮಿದೊಮ್ಮಗೆ ಹಣವನ್ನು ತೆಗೆಯುವುದಿಲ್ಲ. ಅದರಲ್ಲೂ ಈಗ ಯುದ್ಧದ ಸಮಯದಲ್ಲಿ ಯಾವಾಗ ಮಾರುಕಟ್ಟೆ ಏರುತ್ತದೆ, ಇಳಿಕೆಯಾಗುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಇಷ್ಟೊಂದು ಪ್ರಮಾಣದ ಹೂಡಿಕೆಯನ್ನು ಮಾಡಿದವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್ ಶಾಂತಿ ಮಾತುಕತೆ?
Is this the best timed trade of 2026?
At 6:50 AM ET today, $1.5 BILLION in notional value worth of S&P 500 futures contracts were bought.
This trade was so large it sent the entire index +0.3% higher that minute.
Then, 14 minutes later at 7:04 AM ET, President Trump announced… pic.twitter.com/zFdZ1sQxeq
— The Kobeissi Letter (@KobeissiLetter) March 23, 2026
ಟ್ರಂಪ್ ಯುದ್ಧಕ್ಕೆ ಐದು ದಿನಗಳ ಬ್ರೇಕ್ ನೀಡಿದ ಸುದ್ದಿಯನ್ನು ಪ್ರಕಟಿಸಿದ 5 ನಿಮಿಷಗಳಲ್ಲಿ S&P 500 ಮಾರುಕಟ್ಟೆ ಬಂಡವಾಳ 2 ಟ್ರಿಲಿಯನ್ ಡಾಲರ್(187.64 ಲಕ್ಷ ಕೋಟಿ ರೂ.) ಏರಿಕೆಯಾಗಿತ್ತು. 1.5 ಶತಕೋಟಿ ಡಾಲರ್ ಹೂಡಿಕೆ ಮಾಡಿದ ಹಣ ಕೆಲ ನಿಮಿಷಗಳಲ್ಲಿ 60 ದಶಲಕ್ಷ ಡಾಲರ್(562 ಕೋಟಿ ರೂ.) ಲಾಭ ತಂದುಕೊಟ್ಟಿತ್ತು.
ಕದನದ ವಿರಾಮದ ಘೋಷಣೆ ಸಂಬಂಧಿಸಿದಂತೆ ಯಾವುದೇ ಸುಳಿವು ಇಲ್ಲದೇ ಇದ್ದಾಗ ಒಮ್ಮಿದೊಮ್ಮಿಗೆ 4 ರಿಂದ 6 ಪಟ್ಟು ಹಣವನ್ನು ಹೂಡಿಕೆ ಮಾಡಿದವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ.
Let me explain what just happened 👇
5 minutes before the President announced a halt to attacks on Iran… someone placed a $1.5 BILLION bet on stocks going up and dumped $192 million in oil.
5 minutes…
These trades were 4 to 6 times larger than anything else in the entire… https://t.co/6JLFdkJlN9 pic.twitter.com/eY13rlNC6a
— Bark (@barkmeta) March 23, 2026
ಸಾಮಾಜಿಕ ಜಾಲತಾಣದಲ್ಲಿ ಕಿಡಿ
ಅಮೆರಿಕ ನಾಗರಿಕರು ಈ ಯುದ್ಧಕ್ಕೆ ಹಣ ನೀಡುತ್ತಿದ್ದರೆ ರಾಜಕಾರಣಿಗಳು ಯುದ್ಧದ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಈ ರೀತಿ ಆಗುತ್ತಿರುವುದು ಇದು ಹೊಸದೆನಲ್ಲ. ಟ್ರಂಪ್ ಆಡಳಿತದ ಪ್ರತಿಯೊಂದು ಪ್ರಮುಖ ಘೋಷಣೆಯು ಇಳಿಯುವ ಮೊದಲು ಷೇರು ಮಾರುಕಟ್ಟೆಯಲ್ಲಿ ಬೃಹತ್ ಅನುಮಾನಾಸ್ಪದ ವಹಿವಾಟು ನಡೆಯುತ್ತಿದೆ. ಅದು ಸುಂಕದ ವಿಚಾರ ಇರಬಹುದು, ನೀತಿ ಬದಲಾವಣೆ, ಯುದ್ಧ ನಿರ್ಧಾರ ಕೈಗೊಳ್ಳುವ ಮೊದಲು ಯಾರೂ ಊಹಿಸದ ರೀತಿಯಲ್ಲಿ ಇನ್ಸೈಡ್ ಟ್ರೆಂಡಿಂಗ್ ನಡೆಯುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ.

