ಅಮೆರಿಕದ ರಿಫೈನರಿಯಲ್ಲಿ ಭಾರೀ ಸ್ಫೋಟ – ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ

1 Min Read

ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ (Texas) ಬಂದರು ಬಳಿ ಇರುವ ವ್ಯಾಲೆರೊ ಸಂಸ್ಕರಣಾಗಾರದಲ್ಲಿ (Valero Refinery) ಭಾರೀ ಸ್ಫೋಟ (Blast) ಸಂಭವಿಸಿದೆ.

ಸ್ಫೋಟದಿಂದ ಭಾರೀ ಬೆಂಕಿ (Fire) ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪ್ರತ್ಯಕ್ಷದರ್ಶಿಗಳು ಜೋರಾದ ಸ್ಫೋಟದ ನಂತರ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರಿತು ಎಂದು ಹೇಳಿದ್ದಾರೆ. ಕೈಗಾರಿಕಾ ಹೀಟರ್‌ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್‌ ಇಳಿಕೆಗೆ ಕಾರಣ ಏನು?

ಟೆಕ್ಸಾಸ್ ಗಲ್ಫ್ ಕರಾವಳಿಯ ಉದ್ದಕ್ಕೂ 4,000 ಎಕರೆಗಳಲ್ಲಿ ವ್ಯಾಲೆರೊ ಸಂಸ್ಕರಣಾಗಾರ ನಿರ್ಮಾಣವಾವಿದ್ದು ಪ್ರತಿದಿನ 3.80 ಲಕ್ಷದಿಂದ 4.30 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

Share This Article