ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮಿನಿಸ್ಟರ್ ವರ್ಸಸ್ ಎಂಎಲ್‌ಎ ವಾರ್ ಶುರುವಾಗಿದೆ. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisiddegowda) ಸ್ವಪಕ್ಷೀಯ ಸಚಿವರ ವಿರುದ್ಧವೇ ಸರ್ಕಾರಿ ಜಮೀನು ನುಂಗಿದ ಆರೋಪ ಮಾಡಿದ್ದಾರೆ.
ಸಚಿವರು ಒತ್ತಡ ಹಾಕುತ್ತಿದ್ದಾರೆ ಎಂದು ಪಾಂಡವಪುರ ಎಸಿ ಶ್ರೀನಿವಾಸ್‌ಗೌಡ ಸರ್ಕಾರಿ ದಾಖಲೆಗಳನ್ನು ತಿದ್ದಿ ಒಂದೇ ದಿನಕ್ಕೆ ಬೇರೆಯವರ ಜಮೀನನ್ನು ಇನ್ನೊಬ್ಬರ ಖಾತೆ ಮಾಡಿದ್ದಾರೆ. ಶ್ರೀರಂಗಪಟ್ಟಣದ ಬೆಳವಾಡಿ ಗ್ರಾಮದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಇನ್ನೊಬ್ಬರಿಗೆ ಮಾಡಿದ್ದಾರೆ. ಅಲ್ಲದೇ ಸತ್ತವರ ಹೆಸರಿಗೆ ಕೋರ್ಟ್ ನೋಟಿಸ್ ಕಳುಹಿಸಿ ಬಳಿಕ ಅದೇ ದಿನವೇ ಎಸಿ ಕೋರ್ಟ್‌ನಲ್ಲಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮೇ ತಿಂಗಳಲ್ಲಿ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತ
ಇನ್ನೂ ಶ್ರೀರಂಗಪಟ್ಟಣ ತಹಶೀಲ್ದಾರ್‌ಗೆ ಸಚಿವರ ಒತ್ತಡ ಇದೆ. ಬೇಗ ಖಾತೆ ಮಾಡಿ ಎಂದು ಖಾತೆ ಮಾಡಿಸಿದ್ದಾರೆ. ಜೊತೆಗೆ ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ 3 ಎಕರೆ ಪ್ರದೇಶದ ಕೆರೆಯನ್ನು ಮುಚ್ಚಿದ್ದಾರೆ. ಈ ಬಗ್ಗೆ ನಾನು ಸದನದಲ್ಲಿ ಪ್ರಶ್ನೆ ಮಾಡಲು ಸಹ ಕೇಳಿದ್ದೇನೆ. ಆದರೆ ನಮ್ಮ ಕ್ಷೇತ್ರದ ಈ ಅಕ್ರಮದ ಬಗ್ಗೆ ಧ್ವನಿ ಎತ್ತಲು ನನಗೆ ಸದನದಲ್ಲಿ ಅವಕಾಶವೆ ಸಿಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆ ಮಾತಾಡಿದ ಶಾಸಕರು, ನನ್ನ ಕ್ಷೇತ್ರದಲ್ಲಿ ಸರ್ಕಾರಿ ಜಾಗವನ್ನು ಖಾಸಗಿಯವರ ಹೆಸರಿಗೆ ವರ್ಗಾವಣೆ ಮಾಡಿದ ನೂರಾರು ಪ್ರಕರಣಗಳು ನಡೆದಿವೆ. ಕಾಲಿಂಗ್ ಅಟೆನ್ಷನ್ ಕೂಡ ಕೊಟ್ಟಿದ್ದೇನೆ. ಸದನದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ ಅಂದಿದ್ದಾರೆ.ಇದನ್ನೂ ಓದಿ:ಟ್ರಂಪ್ ಹೇಳಿಕೆಯಿಂದ ಕಚ್ಚಾ ತೈಲದ ಬೆಲೆ ದಿಢೀರ್ ಭಾರೀ ಇಳಿಕೆ – ಈಗ ಮತ್ತೆ ಏರಿಕೆ

