ಟ್ರಂಪ್‌ ಹೇಳಿಕೆಯಿಂದ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಇಳಿಕೆ – ಈಗ ಮತ್ತೆ ಏರಿಕೆ

1 Min Read

ಲಂಡನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) 5 ದಿನದ ಕದನ ವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಒಂದು ಬ್ಯಾರೆಲ್‌ ಕಚ್ಚಾ ತೈಲದ (159 ಲೀಟರ್‌) ದರ  11% ಇಳಿಕೆಯಾಗಿದೆ.

ಇಂದು ಒಂದು ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 109.91 ಡಾಲರ್‌ಗೆ (10,220 ರೂ.) ಏರಿಕೆಯಾಗಿತ್ತು. ಆದರೆ ಟ್ರಂಪ್‌ ಇರಾನ್‌ ಜೊತೆಗಿನ ಶಾಂತಿ ಮಾತುಕತೆ ಮತ್ತು ಕದನ ವಿರಾಮ ಕುರಿತ ಸುದ್ದಿ ಪ್ರಕಟಿಸಿದ ನಂತರ ಕಚ್ಚಾ ತೈಲ (Crude Oil)ಬೆಲೆ 93 ಡಾಲರ್‌ಗೆ (8,660 ರೂ.) ಇಳಿಕೆಯಾಗಿತ್ತು.

ಟ್ರಂಪ್‌ ಘೋಷಣೆ ಪ್ರಕಟವಾದ ನಂತರ ಯಾವುದೇ ಶಾಂತಿ ಮಾತುಕತೆ ಅಮರಿಕದ ಜೊತೆ ನಡೆದಿಲ್ಲ ಎಂದು ಇರಾನ್‌ (Iran) ಪ್ರತಿಕ್ರಿಯೆ ನೀಡಿದ ಬಳಿಕ ಮತ್ತೆ ಕಚ್ಚಾ ತೈಲದ ದರ ಏರಿಕೆ ಕಾಣತೊಡಗಿ ಈಗ 96 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದೆ.  ಇದನ್ನೂ ಓದಿ: ನಾವು ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ – ಇರಾನ್‌ ತಿರುಗೇಟು

ಅಮೆರಿಕದ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿ (Hormuz Strait) ಇರಾನ್‌ ಬಂದ್‌ ಮಾಡಿದೆ. ಅಷ್ಟೇ ಅಲ್ಲದೇ ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ 18 ಕೋಟಿ ರೂ. ಶುಲ್ಕ ವಿಧಿಸುವ ತೀರ್ಮಾನ ತೆಗೆದುಕೊಂಡಿತ್ತು.

ಅಮೆರಿಕ, ಇಸ್ರೇಲ್‌ ಮಿತ್ರ ದೇಶಗಳಿ ಹಡಗುಗಳು ಈ ಜಲಸಂಧಿ ಬಳಸಲು ಅವಕಾಶ ನೀಡುವುದಿಲ್ಲ. ತನ್ನ ಮಿತ್ರ ದೇಶಗಳ ಹಡಗುಗಳಿಗೆ ಮಾತ್ರ ಅನುಮತಿ ನೀಡುವುದಾಗಿ ಹೇಳಿತ್ತು. ಸದ್ಯ ಈಗ ಭಾರತ, ಚೀನಾ, ಪಾಕಿಸ್ತಾನ, ಟರ್ಕಿ, ಇರಾಕ್‌ ದೇಶದ ಹಡಗುಗಳಿಗೆ ಮಾತ್ರ ಸಂಚರಿಸಲು ಇರಾನ್‌ ಅನುಮತಿ ನೀಡಿದೆ.

Share This Article