ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ – ಸೆನ್ಸೆಕ್ಸ್‌ 1,700 ಪಾಯಿಂಟ್‌ಗಳ ಕುಸಿತ

1 Min Read

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ತೀವ್ರ ಕುಸಿತ ಕಂಡಿದೆ. ಸೆನ್ಸೆಕ್ಸ್‌ 1,700 ಪಾಯಿಂಟ್‌ ಹಾಗೂ ನಿಫ್ಟಿ ಫಿಫ್ಟಿ 412 ಪಾಯಿಂಟ್‌ಗಳ ಕುಸಿತ ಅನುಭವಿಸಿವೆ.

ಎರಡು ದಿನಗಳ ರಜೆ ಬಳಿಕ ಸೋಮವಾರ ಮಾರುಕಟ್ಟೆ ಓಪನ್‌ ಆಯಿತು. ಮಾರುಕಟ್ಟೆ ತೆರೆಯುತ್ತಿದ್ದಂತೆ ಬ್ಲಡ್‌ ಬಾತ್‌ ಮುಂದುವರಿದಿದೆ. ಸೆನ್ಸೆಕ್ಸ್ 1,786.87 ಪಾಯಿಂಟ್‌ ಅಥವಾ 2.47% ಕುಸಿದು 72,722.73 ಕ್ಕೆ ತಲುಪಿದೆ. ನಿಫ್ಟಿ 580.55 ಪಾಯಿಂಟ್‌ಗಳು ಅಥವಾ 2.51% ಕುಸಿದು 22,530.55 ಕ್ಕೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 33 ಪೈಸೆ ಕುಸಿದು 93.86 ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೋಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ.

ಇತ್ತ ಯುದ್ಧದ ಭೀತಿ, ಕಚ್ಚಾತೈಲ, ಗ್ಯಾಸ್ ಕೊರತೆ ಹಿನ್ನೆಲೆ ದೇಶಿಯ ಹೂಡಿಕೆದಾರರಿಗೂ ಆತಂಕ ಎದುರಾಗಿದೆ. ಪರಿಣಾಮ ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.

Share This Article