ಬೆಂಗ್ಳೂರಲ್ಲಿ ಮುಂದುವರಿದ ಐಷಾರಾಮಿ ಕಾರುಗಳ ದರ್ಬಾರ್ – ರಾಜಾರೋಷವಾಗಿ ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್

1 Min Read

ಬೆಂಗಳೂರು: ಇಲ್ಲಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ (Anil Kumble cCrcle) ರಾಜಾರೋಷವಾಗಿ ಲ್ಯಾಂಬೋರ್ಗಿನಿ ಕಾರೊಂದು (Lamborghini Car) ಡ್ರಿಫ್ಟಿಂಗ್ ಮಾಡಿ, ಬಳಿಕ ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

ಮಾ.21ರ ಬೆಳಗಿನ ಜಾವ 2ರಿಂದ 3ಗಂಟೆ ಸುಮರಿಗೆ ವೇಗವಾಗಿ ಬಂದ KA05 NR0009 ನಂಬರ್‌ನ ಲ್ಯಾಂಬೋರ್ಗಿನಿ ಕಾರು ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎರಡ್ಮೂರು ಬಾರಿ ಡ್ರಿಫ್ಟಿಂಗ್ ಮಾಡಿದೆ. ಬಳಿಕ ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವಿಡಿಯೋ ಸ್ಥಳೀಯರೊಬ್ಬರ ಫೋನ್‌ನಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತಕ್ಕೆ ʻಕರೆಂಟ್‌ ಶಾಕ್‌ʼ ಎದುರಾಗುತ್ತಾ? – ವಿದ್ಯುತ್ ಕಾರ್ಯದರ್ಶಿ ಹೇಳಿದ್ದೇನು?

ಸದ್ಯ ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಚಾಲನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ ಎಂಬ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾ ಮಾತನಾಡಿ, ಬೆಳಗಿನ ಜಾವ 2-3ಗಂಟೆ ಸುಮಾರಿಗೆ ಈ ರೀತಿ ನಡೆದಿದೆ. ನಾವು ಪ್ರಕರಣ ದಾಖಲಿಸಿ, ಮಾಲೀಕ ಯಾರು ಅಂತಾ ಪರಿಶೀಲನೆ ಮಾಡ್ತಿದ್ದೇವೆ. ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ರೆಕಾರ್ಡ್ ಆಗಿದೆ. ಪತ್ತೆ ಹಚ್ಚಿ ನಾವು ಕ್ರಮ ಕೈಗೊಳ್ತೀವಿ. ಆರ್.ಸಿ ಕ್ಯಾನ್ಸಲ್ ಮಾಡೋಕೆ ಮುಂದಾಗ್ತೀವಿ. ಈ ರೀತಿ ರಸ್ತೇಲಿ ಯಾರು ಸ್ಟಂಟ್ ಮಾಡಲು ಅವಕಾಶ ಇಲ್ಲ. ಬೆಂಗಳೂರಿನಲ್ಲಿ ಈ ರೀತಿ ಮಾಡಲು ಅವಕಾಶ ಇಲ್ಲ. ಈ ಥರ ಮಾಡಿದ್ರೆ ಆರ್.ಸಿ ಕ್ಯಾನ್ಸಲ್ ಮಾಡಿ ಕಠಿಣ ಕ್ರಮ ಕೈಗೊಳ್ತೀವಿ ಎಂದಿದ್ದಾರೆ. ಇದನ್ನೂ ಓದಿ:ದಾವಣಗೆರೆಯಲ್ಲಿ ಸಮರ್ಥ್‌ ಶಾಮನೂರಿಗೆ ಕಾಂಗ್ರೆಸ್‌ ಟಿಕೆಟ್‌ ಫಿಕ್ಸ್‌..?

Share This Article