ಭಾರತ – ಇರಾನ್‌ನದ್ದು 75 ವರ್ಷಗಳ ಸ್ನೇಹ – ಇವರು ಎಲ್ಲಾ ಹಾಳು ಮಾಡಿಟ್ಟಿದ್ದಾರೆ: ಕೇಂದ್ರದ ವಿರುದ್ಧ ಶಾಸಕ ಪೊನ್ನಣ್ಣ ಆಕ್ರೋಶ

2 Min Read

– ಕೊಡಗಿನಲ್ಲಿ 1,500 ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ ಕೊರತೆ

ಮಡಿಕೇರಿ: 1953 ರಲ್ಲಿ ಭಾರತ ಮತ್ತು ಇರಾನ್ (India – Iran) ನಡುವೆ ಒಪ್ಪಂದ ಆಯ್ತು. ಉಭಯ ದೇಶಗಳದ್ದು 75 ವರ್ಷಗಳ ಸ್ನೇಹ ಸಂಬಂಧ. ಆದ್ರೆ ಇಂದು ಎಲ್ಲವನ್ನು ಹಾಳು ಮಾಡಿಟ್ಟಿದ್ದಾರೆ ಎಂದು ಕೇಂದ್ರದ ವಿರುದ್ಧ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೋನ್ನಣ್ಣ ಆಕ್ರೋಶ (AS Ponnanna) ಹೊರಹಾಕಿದರು.

ಎಲ್‌ಪಿಜಿ ಸಿಲಿಂಡರ್‌ (LPG Cylinder) ಕೊರೆತೆಯ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇರಾನ್‌ – ಇಸ್ರೇಲ್‌ ಯುದ್ಧದಿಂದಾಗಿ ದೇಶದಲ್ಲಿ ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ. 1953 ರಲ್ಲಿ ಭಾರತ ಮತ್ತು ಇರಾನ್ ನಡುವೆ ಒಪ್ಪಂದ ಆಯ್ತು. ಭಾರತ ಮತ್ತು ಇರಾನ್‌ನದ್ದು 75 ವರ್ಷಗಳ ಸ್ನೇಹ. ಈಗ ಅಲ್ಲಿಂದ ಬರುತ್ತಿರುವ ತೈಲಕ್ಕೆ ತಡೆಯುಂಟಾಗಿದೆ. ಆದ್ರೆ ಯಾವ ಉದ್ದೇಶದಿಂದ ನಮ್ಮ ಪ್ರಧಾನಿಗಳು ಇಸ್ರೇಲ್‌ ಮೇಲೆ ಹೇಳುತ್ತಿದ್ದಾರೋ ತಿಳಿಯುತ್ತಿಲ್ಲ ಎಂದರು. ಇದನ್ನೂ ಓದಿ: ಇರಾನ್‌ನಿಂದ ತೈಲ ಖರೀದಿಸುತ್ತಾ ಭಾರತ? – ವಾಷಿಂಗ್ಟನ್, ಕೇಂದ್ರದ ನಿರ್ದೇಶನಗಳಿಗೆ ಸಂಸ್ಕರಣಾ ಕಂಪನಿಗಳು ವೆಯ್ಟಿಂಗ್

ಇಸ್ರೇಲ್‌ನಿಂದ (Israel) ಭಾರತಕ್ಕೆ ಯಾವುದೇ ಪ್ರಯೋಜನ ಇಲ್ಲ. ರಷ್ಯಾ ಸ್ನೇಹ ಕೂಟ ಚೆನ್ನಾಗಿತ್ತು, ನೆಹರೂ ಅವರು ಮುಂದಾಲೋಚನೆಯಿಂದ ಸ್ನೇಹ ಬೆಳೆಸಿದ್ರು. ಆದ್ರೆ ಇವರು ಎಲ್ಲವನ್ನು ಹಾಳುಮಾಡಿಟ್ಟಿದ್ದಾರೆ. ಅಮೆರಿಕದವರು ರಷ್ಯಾದಿಂದ ತೈಲ ತೆಗೆದುಕೊಳ್ಳಬೇಡಿ ಅಂತಾರೆ. 30 ದಿನ ಮಾತ್ರ ವಿನಾಯಿತಿ ಕೊಡ್ತೀವಿ ಅಂದ್ರೆ, ಅದಕ್ಕೂ ಓಕೆ ಅಂತಾರೆ. ಇದೆಲ್ಲವನ್ನು ನಾವು ಆರೋಪ ಮಾಡುತ್ತಿಲ್ಲ, ಜನರೇ ಪ್ರಶ್ನೆ ಕೇಳಬೇಕು ಎಂದು ಹೇಳಿದರು.

ಇಂದು ಚಿನ್ನ ಮತ್ತು ಎಲ್‌ಪಿಜಿ ದರ ಎಷ್ಟಾಗಿದೆ? 400 ರೂ.ಗೆ ಗ್ಯಾಸ್‌ ಸಿಲಿಂಡರ್‌ ಸಿಗುವಾಗ ತಲೆ ಮೇಲೆ ಹೊತ್ತು ಪ್ರತಿಭಟನೆ ಮಡಿದ್ರು. ಈಗ ಸಾವಿರಾರು ರೂಪಾಯಿ ಆಗಿದೆ. ಯಾರು ದನಿ ಎತ್ತುತ್ತಿಲ್ಲ. ಚಿನ್ನದ ಬೆಲೆ ಏರಿಕೆಯಾಗಿ ಬಡವರು ಮದ್ವೆ ಮಾಡೋಕೆ ಆಗ್ತಿಲ್ಲ. ನಾವು ಇದರ ಬಗ್ಗೆ ಮಾತನಾಡಿದ್ರೆ, ಯುದ್ಧದ ಸಂದರ್ಭದಲ್ಲಿ ಹೀಗೆ ಮಾತಾಡ್ತಾರೆ ಅಂತಾರೆ ಎಂದು ತಿವಿದರು. ಇದನ್ನೂ ಓದಿ: ಹಿಂದೂ ಮಹಾಸಾಗರ ಡೀಗೊ ಗಾರ್ಸಿಯಾ ಬೇಸ್ ಮೇಲೆ ಇರಾನ್ ದಾಳಿ – 4,000 ಕಿಮೀ ದೂರಕ್ಕೆ ಕ್ಷಿಪಣಿ ಹಾರಿಸಿ ದಾಳಿ

1,500 ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ ಕೊರತೆ
ಇರಾನ್‌ – ಇಸ್ರೇಲ್‌ ಯುದ್ಧದಿಂದಾಗಿ ಕೊಡಗಿನಲ್ಲೂ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ಕೊರತೆಯಾಗಿದೆ. ಮಡಿಕೇರಿ ನಗರದಲ್ಲಿರುವ ಟೋಟಲ್ ಗ್ಯಾಸ್ ಏಜೆನ್ಸಿಗೆ ಕಳೆದ ಒಂದು ವಾದದಿಂದ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಇದರಿಂದ ಗ್ಯಾಸ್ ಏಜೆನ್ಸಿ ಕಚೇರಿ ಮುಂಭಾಗದಲ್ಲಿ ನೋ ಸ್ಟಾಕ್ ನಾಮಫಲಕ ಹಾಕಿದ್ದಾರೆ. ಇದರಿಂದ ಟೋಟಲ್ ಗ್ಯಾಸ್ ಸಿಲಿಂಡರ್‌ರನ್ನೇ ಅವಲಂಬಿಸಿದ್ದ 1,500 ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸೌದೆ ಒಲೆ ಅವಲಂಬಿಸಿದ್ರೆ, ಇನ್ನೂ ಕೆಲವರು ದುಪ್ಪಟ್ಟು ದರ ನೀಡಿ ಬ್ಲಾಕ್‌ನಲ್ಲಿ ಖರೀದಿಗೂ ಮುಂದಾಗಿದ್ದಾರೆ.

Share This Article