ಕೊಪ್ಪಳ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದಕ್ಕಾಗಿ ಭಾರತ ಧ್ವಜ ಇರೋ ಹಡಗುಗಳು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬರುತ್ತಿವೆ ಎಂದು ಶಾಸಕ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ.
ಕೊಪ್ಪಳದ (Koppal) ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಭಾರತದಲ್ಲಿ ಮುಸ್ಲಿಮರಿಗೆ ಸುರಕ್ಷತೆ ನೀಡಿದ್ದಾರೆ. ಅದಕ್ಕಾಗಿ ಇರಾನ್ ನಮ್ಮ ದೇಶದ ಹಡಗುಗಳಿಗೆ ರಕ್ಷಣೆ ಕೊಟ್ಟು ಕಳಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಮಹಾಸಾಗರ ಡೀಗೊ ಗಾರ್ಸಿಯಾ ಬೇಸ್ ಮೇಲೆ ಇರಾನ್ ದಾಳಿ – 4,000 ಕಿಮೀ ದೂರಕ್ಕೆ ಕ್ಷಿಪಣಿ ಹಾರಿಸಿ ದಾಳಿ
ಸಚಿವ ಬೋಸರಾಜು ಹೇಳಿಕೆ ಬಗ್ಗೆ ಮಾತನಾಡಿದ ಅವರು, ಮೋದಿ, ಟ್ರಂಪ್ ಗೆಳೆತನ ಜೋರಾಗಿರೋದಕ್ಕೆ ನಮಗೆ ಸಿಲಿಂಡರ್ ಸಿಗ್ತಿಲ್ಲ ಅಂದಿದ್ದರು. ಭಾರತದ ಶಿಪ್‌ಗಳಿಗೆ ತೊಂದರೆ ಮಾಡಬೇಡಿ, ಅವು ಆರಾಮಾಗಿ ಹೋಗಲಿ ಅಂತ ಇರಾನ್‌ನವರೇ ಹೇಳಿದ್ದಾರೆ. ನರೇಂದ್ರ ಮೋದಿಯವರ ಗೆಳೆತನ ಇರಾನ್ ಜೊತೆ ಚೆನ್ನಾಗಿದೆಯಾ? ಅಥವಾ ಟ್ರಂಪ್ ಜೊತೆ ಚೆನ್ನಾಗಿದೆಯಾ ಅಂತ ಬೋಸರಾಜು ನೋಡಬೇಕು ಎಂದು ತಿರುಗೇಟು ನೀಡಿದ್ದಾರೆ.

