ಕೋಲಾರ: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ (Iran-Israel War) ಎಫೆಕ್ಟ್ ಕೋಲಾರದ (Kolar) ಅತಿ ದೊಡ್ಡ ಟೊಮಾಟೊ ಮಾರುಕಟ್ಟೆಗೂ ತಟ್ಟಿದೆ. ಟೊಮಾಟೊ ಇಲ್ಲದೆ ಎಪಿಎಂಸಿ ಮಾರುಕಟ್ಟೆ (APMC Market) ಖಾಲಿ ಖಾಲಿಯಾಗಿದೆ.
ಇತ್ತ ಟೊಮಾಟೊ ಬೆಳೆಯೂ ಇಲ್ಲ, ಬೆಳೆದ ಬೆಳೆಗೆ ಬೆಲೆಯೂ ಇಲ್ಲ. ಏಷ್ಯಾದಲ್ಲೇ ಅತಿ ದೊಡ್ಡ 2ನೇ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಎಪಿಎಂಸಿಯಲ್ಲಿ ಒಂದು ಕೆಜಿ ಟೊಮಾಟೊ (Tomato) 10 ರೂ.ಗೆ ಮಾರಾಟವಾಗುತ್ತಿದ್ದು, ಟೊಮಾಟೊ ಬೆಳೆಯೋದು ದುಬಾರಿಯಾಗಿರುವ ಕಾರಣ, ಕೃಷಿಯಿಂದ ರೈತರು ಸದ್ಯಕ್ಕೆ ಹಿಂದೆ ಸರಿಯುತ್ತಿದ್ದಾರೆ ಎಂಬ ಆತಂಕ ಶುರುವಾಗಿದೆ. ಇದನ್ನೂ ಓದಿ: ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ
ಹಣ್ಣು ತರಕಾರಿಗಳು, ಟೊಮಾಟೊ ಬೆಲೆ ಇಲ್ಲದೆ, ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಲ್ಲದೆ ಖಾಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೃಷಿ ಉತ್ಪನ್ನ ಮತ್ತು ಪರಿಕರಗಳ ಬೆಲೆ ಏರಿಕೆ ಮತ್ತು ಹೋಟೆಲ್ ಉದ್ಯಮದ ಸಂಕಷ್ಟದಿಂದ ಟೊಮಾಟೊ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಏಷ್ಯಾದ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮಾಟೊ ಬೆಳೆ ಇಲ್ಲದೆ, ಇತ್ತ ವ್ಯಾಪಾರವೂ ಇಲ್ಲದೆ ಖಾಲಿ ಖಾಲಿಯಾಗಿದೆ. ಇದನ್ನೂ ಓದಿ: ನಮಾಜ್ ಮಾಡುವ ವೇಳೆ ಹೆಜ್ಜೇನು ದಾಳಿ – ಐವರು ಗಂಭೀರ
ವಾಣಿಜ್ಯ ಸಿಲಿಂಡರ್ಗಳ ಕೊರೆತೆಯಿಂದಾಗಿ ಹೋಟೆಲ್, ರೆಸಾರ್ಟ್ಗಳು ಸಂಕಷ್ಟದಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಟೊಮಾಟೊ ಬೇರೆಡೆ ರಫ್ತು ಆಗದೆ ಮತ್ತು ಬೆಲೆ ಇಲ್ಲದೆ ರೈತ ಪರದಾಡುವಂತಾಗುತ್ತಿದ್ದು, ಟೊಮಾಟೊ ಸೇರಿದಂತೆ ತರಕಾರಿಗಳ ಮೇಲೆ ಪರಿಣಾಮ ಬೀರಿದೆ. ಒಟ್ಟಾರೆ ಕೊಲ್ಲಿ ಯುದ್ಧದಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆ ಸಹ ನಲುಗಿದೆ. ಇದನ್ನೂ ಓದಿ: ಶಿರಸಿ ತಾಲೂಕಿನ ಬಿಳೂರಲ್ಲಿ ಭರ್ಜರಿ ಕೆರೆ ಬೇಟೆ

