ಕುಣಿಗಲ್ ಸೊಸೈಟಿ ಚುನಾವಣೆಯಲ್ಲಿ ಅಕ್ರಮ – ಶಾಸಕ ರಂಗನಾಥ್ ಬಂಧನಕ್ಕೆ ಛಲವಾದಿ ಆಗ್ರಹ

1 Min Read

ಬೆಂಗಳೂರು: ಕುಣಿಗಲ್ ಸೊಸೈಟಿ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ (Ballot Paper) ಅಕ್ರಮವಾಗಿದೆ. ಕೂಡಲೇ ಶಾಸಕ ರಂಗನಾಥ್ ಅವರನ್ನ ಬಂಧನ ಮಾಡಬೇಕು ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಜಿಬಿಎ ಚುನಾವಣೆ (GBA Election) ಬ್ಯಾಲೆಟ್ ಪೇಪರ್ ನಲ್ಲಿ ‌ಮಾಡೋಕೆ ಮುಂದಾಗಿದೆ. ಕುಣಿಗಲ್ ಸಂತೆ ಮಾತೂರ್ ನಲ್ಲಿ ಸೊಸೈಟಿ ಚುನಾವಣೆ ನಡೆದಿದೆ. ಅಲ್ಲಿ ಅಧಿಕಾರಿಯೇ ಬ್ಯಾಲೆಟ್ ನಲ್ಲಿ ವೋಟ್ ಹಾಕಿ ಅಮೇಲೆ ಡಬ್ಬಕ್ಕೆ ಹಾಕಿದ್ದಾರೆ. ನಮ್ಮ ಏಜೆಂಟ್ ಅವರನ್ನ ಹಿಡಿದುಕೊಂಡಿದ್ದಾರೆ. ಪೊಲೀಸರು ಆಫೀಸರ್ ಬಂಧನ ಮಾಡದೇ ಎಸ್ಕೇಪ್ ಮಾಡಿದ್ದಾರೆ. ಹಿಡಿದುಕೊಟ್ಟವನ ಮೇಲೆ FIR ಹಾಕಿದ್ದಾರೆ, ಅಕ್ರಮ ಮಾಡಿದವರ ಮೇಲೆ ಕೇಸ್ ಇಲ್ಲ. ಏನಿದು ಹುನ್ನಾರ ಅಂತ ಪ್ರಶ್ನಿಸಿದರು.

ಮಾಲ್ ಪ್ರಾಕ್ಟೀಸ್ ಮಾಡೋದು‌ ಕಾಂಗ್ರೆಸ್ ಪದ್ದತಿ ‌ಇದು. ಯಾರು ಅಕ್ರಮದಲ್ಲಿ ಇದ್ದಾರೆ ಅವರನ್ನ ಅಮಾನತು ‌ಮಾಡಬೇಕು. ಹಿಡಿದುಕೊಟ್ಟವರ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯಬೇಕು. ಅಧಿಕಾರಿಗಳನ್ನ ಅಮಾನತು ಮಾಡಬೇಕು. ಬ್ಯಾಲೆಟ್ ಪೇಪರ್ ನಿಮ್ಮ ಮುಖಕ್ಕೆ ಹಿಡಿದ ಕನ್ನಡಿ. ಜನ ‌ನಿಮಗೆ ಪಾಠ ಕಲಿಸ್ತಾರೆ. ಶಾಸಕ ರಂಗನಾಥ ಇದರ ಹಿಂದೆ ಇದ್ದಾರೆ. ಶಾಸಕರನ್ನ ಬಂಧನ ‌ಮಾಡಬೇಕು. ಇದನ್ನ ಮಾಡೊಲ್ಲ ಅಂದರೆ ಸದನದಲ್ಲಿ ಇದನ್ನ ಪ್ರಸ್ತಾಪ ಮಾಡ್ತೀವಿ. ರಾಜ್ಯಕ್ಕೆ ಇವರ ಅಕ್ರಮ ಮುಟ್ಟಿಸೋ ಕೆಲಸ ಮಾಡ್ತೀವಿ ಅಂತ ತಿಳಿಸಿದರು.

Share This Article