ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ, ಇರಾನ್‌ ತೀವ್ರ ಹಾನಿಗೊಳಗಾಗಿದೆ: ಇಸ್ರೇಲ್‌ ಪ್ರಧಾನಿ

1 Min Read

– ಈಗ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂದ ನೆತನ್ಯಾಹು
– ನಾವು ಅಮೆರಿಕವನ್ನು ಯುದ್ಧಕ್ಕೆ ಎಳೆದು ತಿಂದಿಲ್ಲ

ಜೆರುಸಲೇಂ: ಯುದ್ಧದಲ್ಲಿ ನಾವು ಗೆಲ್ಲುತ್ತಿದ್ದೇವೆ. ಇರಾನ್‌ (Iran) ತೀವ್ರ ಹಾನಿಗೊಳಗಾಗುತ್ತಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ತಿಳಿಸಿದ್ದಾರೆ.

ಸಾವು ವದಂತಿ ಬಳಿಕ ಮೊದಲ ಬಾರಿಗೆ ನೆತನ್ಯಾಹು ಕ್ಯಾಮೆರಾ ಮುಂದೆ ಬಂದಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, 20 ದಿನಗಳ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯ ನಂತರ ಇರಾನ್ ಇನ್ಮುಂದೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಮತ್ತೊಮ್ಮೆ ಶಾಕ್ – ಐದನೇ ತಲೆಮಾರಿನ F-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ‌?

ನಾನು ಯುದ್ಧದಲ್ಲಿ ಮೃತಪಟ್ಟಿಲ್ಲ, ಅದಕ್ಕೆ ನೀವು ಎಲ್ಲ ಸಾಕ್ಷಿ. ಇಸ್ರೇಲ್‌ನ 20 ದಿನಗಳ ವೈಮಾನಿಕ ದಾಳಿಯಲ್ಲಿ ಇರಾನ್‌ಗೆ ಬಹಳಷ್ಟು ಹಾನಿಯಾಗಿದೆ. ಇರಾನ್ ಇನ್ಮುಂದೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಈಗ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ. ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಸ್ತಾನು ಭಾರಿ ಹಾನಿಯನ್ನು ಅನುಭವಿಸುತ್ತಿದೆ. ಶೀಘ್ರದಲ್ಲೇ ಸಂಪೂರ್ಣವಾಗಿ ನಾಶವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿಮ್‌ ಪರ 99.93% ಮತ ಬಿದ್ದರೂ 0.07% ಹೋಗಿದ್ದು ಯಾರಿಗೆ – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ ಪ್ರಶ್ನೆಗೆ ಸಿಕ್ತು ಉತ್ತರ

Share This Article