ಸ್ಟಂಟ್ & ಕ್ರ್ಯಾಶ್ ರೀಲ್ಸ್‌ ಹುಚ್ಚಾಟ – ಹುಬ್ಬಳ್ಳಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ಬಲಿ

1 Min Read

ಧಾರವಾಡ: ಅತೀ ವೇಗದ ರೀಲ್ಸ್‌ ವಿಡಿಯೋ (Reels) ಮಾಡಲು ಹೋಗಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ ಮೃತಪಟ್ಟಿದ್ದಾನೆ.

ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕ. ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ (Hubballi) ಮನೆಗೆ ಬಂದಿದ್ದ ನಮೀಶ್‌ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡಕ್ಕರ್ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದಾನೆ.

ಆಡಿ (AUDI) ಕಾರು ಮತ್ತು ಅಲ್ಲಿ ಅತೀ ವೇಗವಾಗಿ ಬೈಕ್ ರೈಡ್‌ ಮಾಡಿ ‘ಸ್ಟಂಟ್ ಹಾಗೂ ಕ್ರ್ಯಾಶ್’ ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ನಡುರಸ್ತೆಯಲ್ಲೇ ಧಗಧಗನೇ ಹೊತ್ತಿಯುರಿದ ಕಾರು

 

ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳೀಯರು ಆಡಿ ಚಾಲನೆ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವಿಬ್ಬರು ಸ್ನೇಹಿತರು. ನಾನು ಕಾರನ್ನು ನಿಲ್ಲಿಸಿದ್ದೆ. ಆದರೆ ಅವನೇ ಓಲಾ ಸ್ಕೂಟಿಯಲ್ಲಿ ವೇಗವಾಗಿ ಬಂದು ನನಗೆ ಗುದ್ದಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ.

ಆಡಿ ಕಾರು ಯಾರದ್ದು ಎಂದಿದ್ದಕ್ಕೆ ತಂದೆಯವರ ಕಾರು ಎಂದು ಅಪ್ರಾಪ್ತ ಉತ್ತರಿಸಿದ್ದಾನೆ. ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Share This Article