ಅಮೆರಿಕಕ್ಕೆ ಪಾಕಿಸ್ತಾನದಿಂದ ಪರಮಾಣು ಬೆದರಿಕೆಯಿದೆ: ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್

1 Min Read

ವಾಷಿಂಗ್ಟನ್‌: ಅಮೆರಿಕಕ್ಕೆ (USA) ಅತಿದೊಡ್ಡ ಪರಮಾಣು ಬೆದರಿಕೆಯನ್ನು(Nuclear Threat) ಒಡ್ಡುತ್ತಿರುವ ದೇಶಗಳಲ್ಲಿ ಪಾಕಿಸ್ತಾನವೂ (Pakistan) ಒಂದು ಎಂದು ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್(Tulsi Gabbard) ಹೇಳಿದ್ದಾರೆ.

ಇರಾನ್, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾವನ್ನು ಪರಮಾಣು ಮತ್ತು ಸಾಂಪ್ರದಾಯಿಕ ಸಿಡಿತಲೆಗಳನ್ನು ಒಳಗೊಂಡಂತೆ ಹೊಸ ಕ್ಷಿಪಣಿ ವ್ಯವಸ್ಥೆಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ


ರಷ್ಯಾ, ಚೀನಾ, ಉತ್ತರ ಕೊರಿಯಾ, ಇರಾನ್ ಮತ್ತು ಪಾಕಿಸ್ತಾನಗಳು ಪರಮಾಣು ಮತ್ತು ಸಾಂಪ್ರದಾಯಿಕ ಪೇಲೋಡ್‌ಗಳನ್ನು ಹೊಂದಿರುವ ನವೀನ, ಮುಂದುವರಿದ ಅಥವಾ ಸಾಂಪ್ರದಾಯಿಕ ಕ್ಷಿಪಣಿ ವಿತರಣಾ ವ್ಯವಸ್ಥೆಗಳ ಶ್ರೇಣಿಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿವೆ ಎಂದು ಹೇಳಿದರು.

ರಷ್ಯಾ ಮತ್ತು ಚೀನಾದೊಂದಿಗೆ ಉತ್ತರ ಕೊರಿಯಾ ತನ್ನ ಪಾಲುದಾರಿಕೆಯನ್ನು ಬಲಪಡಿಸುತ್ತಿದೆ ಎಂದರು. ಇದನ್ನೂ ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

ಕಳೆದ ವರ್ಷ ಜೂನ್‌ನಲ್ಲಿ ಇರಾನ್‌ನ ಯುರೇನಿಯಂ ಸಂವರ್ಧನೆ (Nuclear Enrichment)ಕಾರ್ಯಕ್ರಮವನ್ನು ಅಮೆರಿಕ ನಾಶ ಮಾಡಿದೆ. ಅಂದಿನಿಂದ ಯುರೇನಿಯಂ ಸಂವರ್ಧನಾ ಸಾಮರ್ಥ್ಯಗಳನ್ನು ಪುನರ್ನಿರ್ಮಿಸಲು ಇರಾನ್‌ ಮಾಡಿದ ಯಾವುದೇ ಪ್ರಯತ್ನವನ್ನು ಅಮೆರಿಕ ನೋಡಿಲ್ಲ ಎಂದು ತಿಳಿಸಿದರು.
Share This Article