ವೈಷ್ಣೋದೇವಿ ಯಾತ್ರೆಗೂ ಸರ್ಕಾರದಿಂದ ಸಹಾಯ ಧನ: ರಾಮಲಿಂಗಾರೆಡ್ಡಿ

1 Min Read

ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ (Vaishno Devi Yatra) ಭೇಟಿ ನೀಡುವ ಯಾತ್ರಿಗಳಿಗೆ ತಲಾ 5 ಸಾವಿರ ಸಹಾಯಧನ ಯೋಜನೆ ಜಾರಿ ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಮಂಜೇಗೌಡ ಪ್ರಶ್ನೆಗೆ ಉತ್ತರ ನೀಡಿದ ಅವರು, ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ ತಲಾ 5 ಸಾವಿರ ಸಹಾಯಧನ ಯೋಜನೆ ಜಾರಿ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 5 ಕೋಟಿ ಹಣ ಮೀಸಲು ಇಡಲಾಗಿದೆ. 2026-27ನೇ ಸಾಲಿನಿಂದ ಯೋಜನೆ ಅನುಷ್ಠಾನ ಮಾಡ್ತೀವಿ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%

ಇದಲ್ಲದೇ, ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ 30 ಸಾವಿರ, ಚಾರ್ ಧಾಮ್‌ಗೆ 20 ಸಾವಿರ ಮತ್ತು ಕಾಶಿ ಯಾತ್ರಿಗೆ 5 ಸಾವಿರ ಸಹಾಯಧನ ನೀಡಲಾಗುತ್ತದೆ. ಅರ್ಚಕರಿಗೆ ಉಚಿತವಾಗಿ ಯಾತ್ರೆ ಮಾಡಿಸ್ತೀವಿ. ವರ್ಷಕ್ಕೆ 2,500 ಅರ್ಚಕರಿಗೆ ಉಚಿತ ಪ್ರವಾಸ ಕೊಡಿಸ್ತೀವಿ. ಯಾತ್ರಿಗಳು ವೈಷ್ಣೋದೇವಿ ಸೇರಿ ಯಾತ್ರೆಗೆ ಹೋಗಿ ಪೋಟೋ ಅಪ್‌ಲೋಡ್ ಮಾಡಿದ್ರೆ ಸಹಾಯಧನ ಅವರ ಮನೆಗೆ ಕೊಡ್ತೀವಿ. ಯಾರು ಬೇಕಾದ್ರು ಯಾತ್ರೆಗೆ ಹೋಗಬಹುದು. ಫಸ್ಟ್ ಕಮ್ ಫಸ್ಟ್ ಸರ್ವೀಸ್ ಕೊಡ್ತೀವಿ ಎಂದು ಹೇಳಿದರು.

Share This Article