ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್(DK Shivakumar), ಸಿಎಂ ಸಿದ್ದರಾಮಯ್ಯ (CM Siddaramaiah) ಆಯ್ತು ಈಗ ಕಾಂಗ್ರೆಸ್ ಶಾಸಕರೇ ಡಿನ್ನರ್ ಮೀಟಿಂಗ್ (Dinner Meeting) ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲಿನಲ್ಲಿ ಮೊದಲ ಬಾರಿ ಗೆದ್ದ 30ಕ್ಕೂ ಹೆಚ್ಚು ಶಾಸಕರು ಡಿನ್ನರ್ ಸಭೆ ನಡೆಸಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಗೆ 4-5 ಹಿರಿಯ ಶಾಸಕರ ಸಾಥ್ ನೀಡಿದ್ದಾರೆ.
ಸಂಪುಟ ಪುನಾರಚನೆ ನಡೆದರೆ ತಮ್ಮನ್ನು ಪರಿಗಣಿಸುವಂತೆ ಈ ಹಿಂದೆ ಹೊಸದಾಗಿ ಆಯ್ಕೆಯಾದ ಶಾಸಕರು ಬೇಡಿಕೆ ಇಟ್ಟಿದ್ದರು. ಸಿಎಂ ಬದಲಾವಣೆ, ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೈ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕುರ್ಚಿ ಕದನದ ಮಧ್ಯೆ ಸಚಿವರಿಗೆ ಸಿಎಂ ಡಿನ್ನರ್ – ಭಾಗವಹಿಸಿದ 14 ಮಂದಿ ಯಾರು?


