ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ

1 Min Read

ಜೋಗಿ ಪ್ರೇಮ್ (Jogi Prem) ನಿರ್ದೇಶನದ ಕೆಡಿ-ದ ಡೆವಿಲ್ (K.D The Devil) ಸಿನಿಮಾದ ಸರ್ಸೆ ಸರ್ಸೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ (Film Chamber) ಅಧ್ಯಕ್ಷೆ ಜಯಮಾಲ ಅವರಿಗೆ ಮಹಿಳಾ ಆಯೋಗ (Women’s Commission) ಪತ್ರ ಬರೆದಿದೆ. ಸಿನಿಮಾದ ಈ ಹಾಡು ಅಶ್ಲೀಲವಾಗಿದೆ. ಮಹಿಳೆಯರ ಘನತೆಗೆ ಕುತ್ತು ಬರುತ್ತೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಕನ್ನಡ ಮತ್ತು ಹಿಂದಿ ಹಾಡಿನಲ್ಲಿರುವ ಸಾಹಿತ್ಯದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಹಾಡಿನ ವಿರುದ್ಧ  ದೆಹಲಿ ಮೂಲದ ವಕೀಲರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.  ಸೈಬರ್ ಸೆಲ್ ದೂರು ಸಹ ದಾಖಲಾಗಿದೆ. ವಿವಾದ ತಾರಕ್ಕಕ್ಕೆ ಏರುತ್ತಿದ್ದಂತೆ ಹಿಂದಿ ಹಾಡನ್ನು ಯೂಟ್ಯೂಬ್‍ನಿಂದ ಕೆವಿಎನ್ ಪ್ರೊಡಕ್ಷನ್ ತೆಗೆದು ಹಾಕಿದೆ. ಇದನ್ನೂ ಓದಿ: Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ

ಹಿಂದಿಯಲ್ಲಿ ‘ಸರ್ಕೆ ಚುನಾರ್’ ಎಂದು ಹಾಡು ಶುರುವಾಗುತ್ತದೆ. ಈ ಅಶ್ಲೀಲ ಮತ್ತು ಅಸಭ್ಯ ಹಾಡಿನ ಬಗ್ಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತೆ ವಿನೀತ್ ಜಿಂದಾಲ್ ದೂರು ನೀಡಿದ್ದಾರೆ. ದೂರಿನಲ್ಲಿ ನಟಿ ನೋರಾ ಫತೇಹಿ, ಸಂಜಯ್ ದತ್, ಹಿಂದಿ ಗೀತರಚನೆಕಾರ ರಕೀಬ್ ಆಲಂ ಮತ್ತು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಹಾಡನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 294 ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಕೆಡಿ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’

Share This Article