ಜಗಳ ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ; ಗಂಡ – ಹೆಂಡತಿ ಜಗಳದಲ್ಲಿ ಅಮಾಯಕ ಬಲಿ

1 Min Read

ಚಿತ್ರದುರ್ಗ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅಂತೆಯೇ ಗಂಡ – ಹೆಂಡತಿಯ ಜಗಳ (Husband-Wife Fight) ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆಯಾದ ಪರಿಣಾಮ ವ್ಯಕ್ತಿಯೋರ್ವ ಬಲಿಯಾದ ಪ್ರಕರಣ ಚಿತ್ರದುರ್ಗದ (Chitradurga) ಬುದ್ಧ ವೃತ್ತದಲ್ಲಿ ನಡೆದಿದೆ.

ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ. ಈ ವೇಳೆ ದಂಪತಿ ಜಗಳ ಬಿಡಿಸಲು ಮುಂದಾದ ತಾಜ್‌ಪೀರ್ (42) ಮೇಲೆ ಸಾಧಿಕ್‌ವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿರುವ ಪರಿಣಾಮ ತಾಜ್‌ಪೀರ್ ಗಂಭೀರವಾಗಿ ಗಾಯಗೊಂಡು, ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ದುಬೈ ಏರ್‌ಪೋರ್ಟ್‌ ಬಳಿ ಇರಾನ್ ಡ್ರೋನ್‌ ದಾಳಿ – ವಿಮಾನಗಳ ಹಾರಾಟ ಸ್ಥಗಿತ

ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಜ್‌ಪೀರ್ ಸಾವನ್ನಪ್ಪಿದ್ದಾರೆ. ಈ ವೇಳೆ ಸಾಧಿಕ್‌ವುಲ್ಲಾ ಹಾಗೂ ತಾಜ್‌ಪೀರ್ ಮಧ್ಯೆ ನಡೆದ ಗಲಾಟೆ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಆರೋಪಿ ಸಾಧಿಕ್‌ವುಲ್ಲಾನನ್ನು ಬಂಧಿಸಿರುವ ಬಡಾವಣೆ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಆಸ್ತಿ ಕಲಹ – ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ಕೊಂದ ತಮ್ಮ

Share This Article