ಆಸ್ತಿಗಾಗಿ ಸ್ನೇಹಿತನಿಂದಲೇ ಕಬ್ಬಿನ ತೋಟದಲ್ಲಿ ಮಹಿಳೆಯ ಕೊಲೆ

1 Min Read

ಚಿಕ್ಕೋಡಿ: ಕಬ್ಬಿನ ತೋಟದಲ್ಲಿ(Sugar Cane) ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ(Belagavi) ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಸುಜಾತಾ ಪವಾರ (34) ಮೃತ ಮಹಿಳೆ. ಮಾರ್ಚ್ 5 ರಂದು ಮಹಿಳೆಯನ್ನು ಅಥಣಿ (Athani) ಪಟ್ಟಣದ ಸಮೀಪದಲ್ಲಿರುವ ಪ್ರದೀಪ್ ಗುಂಡಾ ಎಂಬುವವರ ಕಬ್ಬಿನ ತೋಟದಲ್ಲಿ ಕೊಲೆ ಮಾಡಲಾಗಿದೆ.

ಮೃತ ಸುಜಾತಾ ಹಾರೂಗೇರಿಯಲ್ಲಿರುವ ಆಕೆಯ ಗಂಡನ ಜೊತೆ ಸಂಬಂಧ ಕಡಿದುಕೊಂಡು ತವರು ಮನೆಯಾದ ಅಥಣಿಯಲ್ಲಿ ವಾಸವಿದ್ದಳು. ಈ ವೇಳೆ ಕುಮಾರ ಹವಾಲ್ದಾರ್ ಸುಜಾತಾ ಜೊತೆ ಸಂಬಂಧ ಹೊಂದಿದ್ದ. ಇದನ್ನೂ ಓದಿ:ʻನಾನು ಸತ್ತಿದ್ದೇನೆʼ – ಕಾಫಿ ಕುಡಿಯುತ್ತಾ ವಿರೋಧಿಗಳನ್ನು ಟ್ರೋಲ್‌ ಮಾಡಿದ ನೆತನ್ಯಾಹು

ಕುಮಾ‌ರ್ ಮಹಿಳೆಯ ಆಸ್ತಿ ಹೊಡೆಯಲು ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ. ಮಾರ್ಚ್ 5 ರಂದು ಮಧ್ಯಾಹ್ನ ಆರೋಪಿ ಕುಮಾರ ಸುಜಾತಾಳನ್ನು ಬೈಕ್ ಮೇಲೆ ಕರೆದೊಯ್ದು ಕಬ್ಬಿನ ತೋಟದಲ್ಲಿ ಆಕೆಯ ಕುತ್ತಿಗೆಗೆ ಬಟ್ಟೆಯಿಂದ ಕಟ್ಟಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Share This Article