ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌

1 Min Read

ಬಾಲಿವುಡ್‌ ಸ್ಟಾರ್‌ ನಟ ಆಮೀರ್‌ ಖಾನ್‌ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಪತ್ನಿಯರು ಹಾಗೂ ಹಾಲಿ ಗರ್ಲ್‌ಫ್ರೆಂಡ್‌ ಜೊತೆ ಸೇರಿಕೊಂಡು ಆಮೀರ್‌ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಕೊಂಡಿದ್ದಾರೆ.

ಶನಿವಾರ (ಮಾರ್ಚ್ 14) ಅಮೀರ್ ಖಾನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಭಾಗವಹಿಸಿದ್ದರು. ಸಂಗಾತಿ ಗೌರಿ ಸ್ಪ್ರಾಟ್, ಮೊದಲ ಪತ್ನಿ ರೀನಾ ದತ್ತಾ ಮತ್ತು ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಇರಾ ಖಾನ್ ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಆಮೀರ್‌ ಖಾನ್ ಎರಡನೇ ಪತ್ನಿ ಕಿರಣ್ ರಾವ್ ಅವರ ಮಗ ಆಜಾದ್ ರಾವ್ ಖಾನ್ ಸಹ ಹಾಜರಿದ್ದರು. ಕುಟುಂಬ ಸದಸ್ಯರಲ್ಲದೆ, ಕೆಲವು ಸೆಲೆಬ್ರಿಟಿಗಳು ಸಹ ಭಾಗವಹಿಸಿದ್ದರು.

ನಟ ವಿಕ್ಕಿ ಕೌಶಲ್, ರಿತೇಶ್ ದೇಶಮುಖ್ ಪತ್ನಿ ಜೆನಿಲಿಯಾ ಡಿಸೋಜಾ ಅವರೊಂದಿಗೆ ಆಗಮಿಸಿದ್ದರು. ಚಲನಚಿತ್ರ ನಿರ್ಮಾಪಕ ರಿತೇಶ್ ಸಿಧ್ವಾನಿ ಕೂಡ ಬರ್ತ್‌ಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This Article