ಪಿಜಿ ವೈದ್ಯಕೀಯ ಅಂತಿಮ ಸುತ್ತು- 39 ಮಂದಿಗೆ ಸೀಟು ಹಂಚಿಕೆ: ಕೆಇಎ

1 Min Read

ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ (PG Medical Course) ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ಒಟ್ಟು 39 ಮಂದಿಗೆ ಸೀಟು ಸಿಕ್ಕಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ಈ ಸುತ್ತಿನ ಸೀಟು ಹಂಚಿಕೆ ನಂತರ ಇನ್ನೂ 744 ಸೀಟು ಬಾಕಿ ಉಳಿದಂತಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ದೊಡ್ಡ ರಾಜತಾಂತ್ರಿಕ ಗೆಲುವು – ಭಾರತದ ಹಡಗುಗಳ ಸಂಚಾರಕ್ಕೆ ಇರಾನ್‌ ಅನುಮತಿ

ಇದುವರೆಗೂ ಸೀಟು ಹಂಚಿಕೆಯಾಗದವರಿಗೆ ಕೋರ್ಸ್ ಶುಲ್ಕದ ಡಿಡಿ ಅಥವಾ ಚೆಕ್ ಪಡೆದು ಆಪ್ಷನ್ಸ್ ದಾಖಲಿಸಲು ಇಂದು ಇಡೀ ದಿನ ಅವಕಾಶ ನೀಡಲಾಗಿತ್ತು. ಒಟ್ಟು 55 ಮಂದಿ ಡಿಡಿ/ಚೆಕ್ ಕೊಟ್ಟಿದ್ದರು. ಆದರೆ 41 ಮಂದಿ ಮಾತ್ರ ಆಪ್ಷನ್ಸ್ ದಾಖಲಿಸಿದ್ದರು. ಅವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹೋಟೆಲ್‌ನಲ್ಲಿ ಬ್ರೇಕ್‌ಫಾಸ್ಟ್ ಮಾಡಿದವರಿಗೆ 30 ರೂ. ಗ್ಯಾಸ್‌ ಸಪ್ಲೈ ಚಾರ್ಜ್‌ – ಗ್ರಾಹಕರ ಆಕ್ರೋಶ
ಸೀಟು ಹಂಚಿಕೆಯಾದವರು ಮಾ.12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
Share This Article