ಲಕ್ನೋ: ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ (Pothole) ಜನರು ಗಾಯಗೊಂಡ ಸುದ್ದಿ, ಸಾವನ್ನಪ್ಪಿದ ಸುದ್ದಿಯನ್ನು ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ರಸ್ತೆಗುಂಡಿಯಿಂದ ಮಹಿಳೆಯೊಬ್ಬರು ಬದುಕುಳಿದ ಪವಾಡ ಸುದ್ದಿ ದೇಶದ ಗಮನ ಸೆಳೆದಿದೆ.
ಉತ್ತರ ಪ್ರದೇಶದ 50 ವರ್ಷದ ವಿನೀತಾ ಶುಕ್ಲಾ ಎಂಬ ಮಹಿಳೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೆದುಳು ನಿಷ್ಕ್ರಿಯಕ್ಕೀಡಾಗಿದ್ದರು. ಅವರನ್ನು ಮೀರತ್ ನಗರ ಆಸ್ಪತ್ರೆಗೆ ದಾಖಲಿಸಿದ್ದಾಗ ವೈದ್ಯರು ಹಲವು ಪರೀಕ್ಷೆ ನಡೆಸಿ ‘ಬ್ರೈನ್ ಡೆಡ್’ (Brain Dead) ಅಂತ ವರದಿಯನ್ನೂ ಕೊಟ್ಟಿದ್ದರು. ಇದರಿಂದ ನೊಂದ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಪತ್ನಿಯನ್ನು ಫೆ. 24ರಂದು ಅಂಬುಲೆನ್ಸ್‌ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ, ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ 74ರಲ್ಲಿ ಅಂಬುಲೆನ್ಸ್ ವೇಗವಾಗಿ ಹೋಗುವಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಇಳಿದಿದೆ. ಈ ವೇಳೆ, ವಿನೀತಾ ಶುಕ್ಲಾ ದೇಹದಲ್ಲಿ ದೊಡ್ಡಮಟ್ಟದ ಸಂಚಲನ ಉಂಟಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ದೇಹದಲ್ಲಿ ಚಲನೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು
ಕೂಡಲೇ ಎಚ್ಚೆತ್ತುಕೊಂಡ ಮಹಿಳೆಯ ಕುಟುಂಬದವರು ವಾಪಸ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರಿಗೆ ಎಲ್ಲಾ ವಿದ್ಯಮಾನವನ್ನು ವಿವರಿಸಿದ್ದಾರೆ. ವೈದ್ಯರು ಕೂಡಲೇ ಚಿಕಿತ್ಸೆಯನ್ನು ನೀಡಿದ ನಂತರ, ಸಾವಿನ ಅಂಚಿನಲ್ಲಿದ್ದ ವಿನೀತಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸದ್ಯ ಈ ಸುದ್ದಿ ದೇಶಾದ್ಯಂತ ವೈರಲ್ ಆಗಿದೆ. ಇದನ್ನೂ ಓದಿ: ಭಾರತಕ್ಕೆ ಪ್ರಯಾಣಿಸುತ್ತಿದ್ದ ಥಾಯ್ ಸರಕು ಹಡಗಿನ ಮೇಲೆ ಇರಾನ್ ದಾಳಿ


