ಎಲ್‌ಪಿಜಿ ಗ್ಯಾಸ್‌ ದರ ಏರಿಕೆ, ವಿತರಣೆಯೂ ಇಲ್ಲ – ಆಟೋ ಚಾಲಕರ ಪರದಾಟ

1 Min Read

ಗದಗ: ಇರಾನ್‌ ಯುದ್ಧದಿಂದ (Iran War) ಮುದ್ರಣಾಕಾಶಿಯಲ್ಲೂ ಎಲ್‌ಪಿಜಿ ಗ್ಯಾಸ್‌ಗಾಗಿ(LPG Gas) ಆಟೋ ಚಾಲಕರು ಪರದಾಡುವಂತಾಗಿದೆ.

ನಗರದ ಎಪಿಎಂಸಿ ಬಳಿ ಇರುವ ಗ್ಯಾಸ್ ಬಂಕ್‌ಗೆ ಗಿ ಆಟೋ ಚಾಲಕರು (Auto Driver) ಮುಗಿಬಿದ್ದಾರೆ. ಇರಾನ್‌-ಇಸ್ರೇಲ್ ಯುದ್ಧದಿಂದ ನಮಗೆ ಗ್ಯಾಸ್ ಸಿಗ್ತಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಇದರಿಂದ ಬಡ ಆಟೋ ಚಾಲಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಆಟೋ ನಂಬಿ ಜೀವನ ನಡೆಸುತ್ತಿರುವ ನಮಗೆ ಸಾಕಷ್ಟು ತೊಂದರೆ ಆಗ್ತಿದೆ. ಹತ್ತಾರು ವರ್ಷಗಳಿಂದ ಆಟೋ ನಂಬಿಕೊಂಡು ಬಂದಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.  ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬಂದ್ – ಸಂಪೂರ್ಣವಾಗಿ ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು

 

ನಾವು ಬೇಡಿಕೆ ಇಟ್ಟಿದ್ದರೂ ವಿತರಣೆ ಆಗುತ್ತಿಲ್ಲ. ಸ್ಟಾಕ್‌ ಇಲ್ಲ ಎನ್ನುತ್ತಿದ್ದಾರೆ. ಇಂದು ಅಥವಾ ನಾಳೆ ಬಂಕ್ ಖಾಲಿ ಆಗಬಹುದು. ಗ್ಯಾಸ್ ಖಾಲಿ ಆದ ಮೇಲೆ ಸ್ಟಾಕ್‌ ಬರುವವರೆಗೆ ಬಂದ್‌ ಮಾಡಬೇಕಾಗುತ್ತದೆ ಎಂದು ಬಂಕ್‌ ಸಿಬ್ಬಂದಿ ಹೇಳಿದ್ದಾರೆ.  ಇದನ್ನೂ ಓದಿ:  ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

ಕಳೆದ 10 ದಿನಗಳಲ್ಲಿ ರಿಕ್ಷಾಗಳಲ್ಲಿ ಬಳಸುವ ಎಲ್‌ಪಿಜಿ ಗ್ಯಾಸ್ ದರ ಬರೋಬ್ಬರಿ 20 ರೂಪಾಯಿ ಏರಿಕೆಯಾಗಿದೆ.
Share This Article