ಅಮೆರಿಕದಲ್ಲಿ ರಿಲಯನ್ಸ್‌ನಿಂದ ಹೊಸ ತೈಲ ಸಂಸ್ಕರಣಾ ಘಟಕ: ಟ್ರಂಪ್‌ ಘೋಷಣೆ

2 Min Read

– ಟೆಕ್ಸಾಸ್‌ನಲ್ಲಿ ತೈಲ ಸಂಸ್ಕರಣಾಗಾರ – 27.56 ಲಕ್ಷ ಕೋಟಿ ರೂ. ಹೂಡಿಕೆ

ವಾಷಿಂಗ್ಟನ್‌: ಭಾರತದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಲಿಮಿಟೆಡ್‌ ಕಂಪನಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಘೋಷಣೆ ಮಾಡಿದ್ದಾರೆ.

300 ಬಿಲಿಯನ್ ಡಾಲರ್(27.56 ಲಕ್ಷ ಕೋಟಿ ರೂ.) ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗಲಿದ್ದು 50 ವರ್ಷಗಳ ಬಳಿಕ ಅಮೆರಿಕದ ತೈಲ ಸಂಸ್ಕರಣಾ ಘಟಕವನ್ನು ತೆರೆಯಲಾಗುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಟ್ರೂತ್‌ನಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಹೊಸ ತೈಲ ಸಂಸ್ಕರಣಾಗಾರವನ್ನು ತೆರೆಯಲಾಗುತ್ತಿದೆ. ದು ಐತಿಹಾಸಿಕ 300 ಬಿಲಿಯನ್ ಡಾಲರ್ ಒಪ್ಪಂದವಾಗಿದ್ದು ಅಮೆರಿಕದ ಇತಿಹಾಸದಲ್ಲಿಯೇ ಅತೀ ದೊಡ್ಡದು ಎಂದಿದ್ದಾರೆ.  ಇದನ್ನೂ ಓದಿ: ಇರಾನ್‌ನಿಂದ ಖಡಕ್‌ ಪ್ರತಿಕ್ರಿಯೆ – ತೈಲ ಟ್ಯಾಂಕರ್‌ ಕುರಿತ ಅಮೆರಿಕದ ಪೋಸ್ಟ್‌ ಡಿಲೀಟ್‌

ಅಮೆರಿಕನ್ ಕಾರ್ಮಿಕರು, ಇಂಧನ ಮತ್ತು ದಕ್ಷಿಣ ಟೆಕ್ಸಸ್‌ನ(Texas) ಮಹಾನ್ ಜನರ ಬೃಹತ್ ಗೆಲುವು ಇದು. ಈ ಅದ್ಭುತ ಹೂಡಿಕೆಗಾಗಿ ಭಾರತದಲ್ಲಿನ ನಮ್ಮ ಪಾಲುದಾರರಿಗೆ ಮತ್ತು ಅವರ ಅತಿದೊಡ್ಡ ಖಾಸಗಿ ಸ್ವಾಮ್ಯದ ಇಂಧನ ಕಂಪನಿಯಾದ ರಿಲಯನ್ಸ್‌ಗೆ ಧನ್ಯವಾದಗಳು. ತೆರಿಗೆಗಳನ್ನು ಕಡಿಮೆ ಮಾಡುತ್ತಿರುವುದರಿಂದ ನಮ್ಮ ರಾಷ್ಟ್ರಕ್ಕೆ ಶತಕೋಟಿ ಡಾಲರ್‌ಗಳ ಡೀಲ್‌ಗಳು ಮರಳಿ ಬರುತ್ತಿವೆ. ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿರುವ ಹೊಸ ಸಂಸ್ಕರಣಾಗಾರವು ಅಮೆರಿಕದ ಮಾರುಕಟ್ಟೆಗಳಿಗೆ ಇಂಧನ ನೀಡುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಈ ಘಟಕದಿಂದ ಅಮೆರಿಕದ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ವಿಶ್ವದ ಅತ್ಯಂತ ಸ್ವಚ್ಛವಾದ ಸಂಸ್ಕರಣಾಗಾರವಾಗಲಿದೆ. ಇದು ಜಾಗತಿಕ ರಫ್ತಿಗೆ ಶಕ್ತಿ ತುಂಬುತ್ತದೆ ಮತ್ತು ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುದರ ಜೊತೆಗೆ ಆರ್ಥಿಕವಾಗಿಯೂ ಬೆಳವಣಿಗೆಯಾಗಲಿದೆ. ಅಮೆರಿಕ ಮೊದಲು, ಯಾವಾಗಲೂ! ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

Share This Article