ಇರಾನ್‌ ಬೀದಿಯಲ್ಲಿ ಬೆಂಕಿಯ ಮಳೆ – ಇಸ್ರೇಲ್‌ ದಾಳಿಗೆ ಅಮೆರಿಕ ಅಸಮಾಧಾನ

1 Min Read

ವಾಷಿಂಗ್ಟನ್‌: ಇರಾನ್‌ (Iran) ವಿರುದ್ಧ ಜಂಟಿಯಾಗಿ ದಾಳಿ ನಡೆಸುತ್ತಿರುವ ಸ್ನೇಹಿತ ರಾಷ್ಟ್ರಗಳಾದ ಅಮೆರಿಕ (USA) ಮತ್ತು ಇಸ್ರೇಲ್‌ (Isreal) ಮಧ್ಯೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಇರಾನ್‌ನ 30 ತೈಲ ಘಟಕಗಳ (Petroleum Distribution Sites) ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ಇಸ್ರೇಲಿನ ಈ ನಡೆಗೆ ಅಮೆರಿಕ ಆಕ್ಷೇಪಿಸಿದೆ ಎಂದು ವರದಿಯಾಗಿದೆ.

ಇಸ್ರೇಲಿನ ಈ ವಿಧ್ವಂಸಕ ದಾಳಿಗಳು ತೈಲ ಬೆಲೆಯನ್ನು ಹೆಚ್ಚಾಗುವಂತೆ ಮಾಡುವ ಜೊತೆಗೆ ಇರಾನ್ ಸಾರ್ವಜನಿಕರು ಅಲ್ಲಿನ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮಾಡುವ ಸಾಧ್ಯತೆಗಳಿವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇದು ಸದ್ಯ ಮಿತ್ರರ ನಡುವೆ ಸಣ್ಣಮಟ್ಟದಲ್ಲಿ ಭಿನ್ನತೆಗೆ ಕಾರಣವಾಗಿದೆ. ಇದನ್ನೂ ಓದಿ: US-Israel-Iran War: ಕಚ್ಚಾತೈಲ ಬೆಲೆ ಏರಿಕೆ – ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿದ ಬೆಲೆ

 

ಇರಾನ್ ರಾಜಧಾನಿಯ ಬಳಿಯ ಹಲವಾರು ತೈಲ ಸಂಗ್ರಹಾಗಾರಗಳು ಮತ್ತು ಪೆಟ್ರೋಲಿಯಂ ವಿತರಣಾ ತಾಣಗಳ ಮೇಲೆ ನಡೆಸಿದ ದಾಳಿಯಿಂದ ದೊಡ್ಡ ಬೆಂಕಿ ಹೊತ್ತಿಕೊಂಡಿದ್ದು ಮತ್ತು ನಗರದ ಕೆಲವು ಭಾಗಗಳಲ್ಲಿ ದಟ್ಟ ಹೊಗೆ ಹರಡಿತ್ತು.

ಟೆಹ್ರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿತ್ತು.

Share This Article