ಚಿನ್ನದಾಸೆಗೆ ಒಂಟಿ ವೃದ್ಧೆ ಕೊಲೆ ಶಂಕೆ; ಚಿನ್ನದ ಸರ, ಓಲೆ, ಹಣ ಕಳವು

1 Min Read

ಚಾಮರಾಜನಗರ: ಚಿನ್ನದಾಸೆಗೆ ಒಂಟಿ ವೃದ್ಧೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಚಿನ್ನದ ಸರ, ಓಲೆ, ನಗದನ್ನು ಕಳ್ಳತನ ಮಾಡಿರುವ ಘಟನೆ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ನಡೆದಿದೆ.

ಸಿದ್ದಮ್ಮ (70) ಮೃತ ದುರ್ದೈವಿ. ವೃದ್ಧೆಯನ್ನು ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯಲ್ಲಿದ್ದ 20 ಗ್ರಾಂ ಚಿನ್ನದ ಸರ, 10 ಗ್ರಾಂ ಓಲೆ, 50 ಸಾವಿರ ನಗದು ಕಳವಾಗಿದೆ. ರಾತ್ರಿ ಮಲಗಿದ ವೇಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಲಾಟೆ – ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ

ಕುಟುಂಬಸ್ಥರ ಆರೋಪವೇನು?
ನಿನ್ನೆ ರಾತ್ರಿ ಕರೆ ಮಾಡಿ ಮಾತಾಡಿದ್ದೆ. ಊಟ ಮಾಡಿ ನಮ್ಮ ತಾಯಿ ಮಲಗಿದ್ದಳು. ಬೆಳಗ್ಗೆ ಪಕ್ಕದ ಮನೆಯವರು ನಿಮ್ಮ ತಾಯಿ ಊರಿಗೆ ಬಂದಿದ್ದಾರೆಯೇ ಅಂತಾ ಕರೆ ಮಾಡಿದ್ದರು. ಮನೆಯ ಕಿಟಕಿಯಿಂದ ನೋಡಿದ ವೇಳೆ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

ವೃದ್ಧೆ ಸಿದ್ದಮ್ಮ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಚಿನ್ನ ಹಾಗೂ ಹಣದಾಸೆಗೆ ಕತ್ತು ಹಿಸುಕಿ ಕೊಂದಿರುವ ಆರೋಪ ಮಾಡಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಾಸಕ ಬಸವರಾಜ್ ಶಿವಗಂಗಾ ಪಿಎ ಆತ್ಮಹತ್ಯೆ

Share This Article