– ಸಿದ್ದರಾಮಯ್ಯ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರ
ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ದಾಖಲೆಯ 17ನೇ ಬಜೆಟ್ (Budget) ಮಂಡಿಸಲಿದ್ದಾರೆ. ಸಿಎಂ ಅವರ ಇಂದಿನ ಬಜೆಟ್ ಮೇಲೆ ದೊಡ್ಡ ನಿರೀಕ್ಷೆಗಳಿದ್ದು, ವಿವಿಧ ಕ್ಷೇತ್ರಗಳು ಗುಡ್ನ್ಯೂಸ್ಗಾಗಿ ಕಾದುಕುಳಿತಿವೆ.
ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ 17ನೇ ಬಜೆಟ್ ಇದಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನ ನಿರ್ಮಿಸಲಿದ್ದಾರೆ. ಸಿದ್ದರಾಮಯ್ಯರ ಈ ಬಜೆಟ್ ಮೇಲೆ ದುಡಿಯುವ ವರ್ಗ ಬಹಳ ದೊಡ್ಡ ಮಟ್ಟದ ನಿರೀಕ್ಷೆಯಲ್ಲಿದೆ. ಈ ಬಾರಿ ಬಜೆಟ್ನಲ್ಲಿ ನಮಗೂ ಗುಡ್ನ್ಯೂಸ್ ಸಿಗಬಹುದೆಂಬ ಕಾತುರತೆಯಲ್ಲಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಸಂಜು ಬ್ಯಾಟಿಂಗ್, ಬುಮ್ರಾ ಬೌಲಿಂಗ್, ಅಕ್ಷರ್ ಸ್ಟನ್ನಿಂಗ್ ಕ್ಯಾಚ್ – 7 ರನ್ಗಳ ರೋಚಕ ಜಯ, 4ನೇ ಬಾರಿ ಟೀಂ ಇಂಡಿಯಾ ಫೈನಲಿಗೆ
ಹೌದು, ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಿಎಂ ವಿವಿಧ ವಲಯಗಳ ಸಂಘಟನೆಗಳೊಂದಿಗೆ ಸಭೆ ಮಾಡಿ, ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ಈಗ ಇಂದಿನ ಬಜೆಟ್ನಲ್ಲಿ ವಲಯಗಳಿಟ್ಟ ಬೇಡಿಕೆ ಸಂಬಂಧ ಸರ್ಕಾರ ನಿರೀಕ್ಷೆಗಳಿಗೆ ನೀರೆರೆಯುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ. ಪ್ರಮುಖವಾಗಿ ಹೋಟೆಲ್ ಉದ್ಯಮ, ಟ್ಯಾಕ್ಸಿ, ಆಟೋ ಚಾಲಕರು, ಸಾರಿಗೆ ನೌಕರರು ಬೀದಿಬದಿ ವ್ಯಾಪಾರಿಗಳು, ಕೈಗಾರಿಕಾ ವಲಯಗಳು ಸೇರಿದಂತೆ ದುಡಿಯುವ ವರ್ಗದ ಚಿತ್ತ ಇಂದಿನ ಬಜೆಟ್ ನತ್ತ ನೆಟ್ಟಿದೆ. ಇದನ್ನೂ ಓದಿ: ದಾವಣಗೆರೆ ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ – ಸಂಧಾನ ಸಭೆ ವಿಫಲ
ಹೋಟೆಲ್ ಉದ್ಯಮ ಈ ಬಾರಿ 24*7 ಹೋಟೆಲ್ ವ್ಯಾಪಾರಕ್ಕೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಜೊತೆಗೆ ಲೈಸನ್ಸ್ ಮತ್ತು ಟ್ಯಾಕ್ಸ್ ವಿಚಾರದಲ್ಲಿ ರಿಲ್ಯಾಕ್ಸ್ಗೆ ಮನವಿ ಕೂಡ ಮಾಡಿದೆ. ಇನ್ನೂ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ಕೂಡ ಹಲವು ನಿರೀಕ್ಷೆಯಲ್ಲಿದ್ದಾರೆ. ಪ್ರಮುಖವಾಗಿ ಪ್ರತಿ 100 ಕಿ.ಮೀಗಳಿಗೆ ಹೆದ್ದಾರಿಯಲ್ಲಿ ಬಹುಮಹಡಿ ಪಾರ್ಕಿಂಗ್, ರಸ್ತೆ ಸುರಕ್ಷತೆ ಕುಂದುಕೊರತೆಗಳಿಗೆ ಚಾಲಕ ನಿಗಮ ಮಂಡಳಿಗೆ ಮನವಿ ಮಾಡಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ರಾಜೀನಾಮೆ
ಇನ್ನೂ, ಆಟೋ ಸಂಘಟನೆಗಳು ಕೂಡ ಸರ್ಕಾರದ ಮುಂದೆ ಸಾಲು ಸಾಲು ಮನವಿ ಇಟ್ಟು, ಬೇಡಿಕೆ ಈಡೇರಬಹುದೆಂಬ ನಿರೀಕ್ಷೆಯಲ್ಲಿವೆ. ಪ್ರಮುಖವಾಗಿ, ಬೈಕ್ ಟ್ಯಾಕ್ಸಿ ನಿಷೇಧ, ಚಾಲಕರ ಅಭಿವೃದ್ಧಿ ನಿಗಮ, ಚಾಲಕರಿಗೆ ಜಾತಿವಾರು ನಿಗಮಗಳಿಂದ ಸಾಲ, ಇವಿ ಆಟೋ ಕೊಳ್ಳುವವರಿಗೆ 50% ರಷ್ಟು ಸಹಾಯಧನ, ವಸತಿ ಯೋಜನೆ ಅಡಿ ಚಾಲಕರಿಗೆ ಪ್ರತ್ಯೇಕ ಕಾಲೋನಿಗಳಿಗೆ ಮನವಿ ಇಟ್ಟಿವೆ. ಇನ್ನೂ ಸಾರಿಗೆ ನೌಕರರು ಕೂಡ ಈ ಬಾರಿಯಾದ್ರು ನಮ್ಮ ಬೇಡಿಕೆ ಈಡೇರುತ್ತಾ ಅಂತ ಕಾದು ಕುಳಿತಿದ್ದಾರೆ. ಮುಖ್ಯವಾಗಿ 36 ತಿಂಗಳ ಅರಿಯರ್ಸ್ ಮತ್ತು 2024ರಿಂದ ಸಂಬಳ ಹೆಚ್ಚಳದ ಬೇಡಿಕೆ ಬಗ್ಗೆ ಸರ್ಕಾರ ಇಂದು ಬಜೆಟ್ನಲ್ಲಿ ಒಂದು ನಿರ್ಧಾರಕ್ಕೆ ಬರಲಿದೆ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ. ಇದನ್ನೂ ಓದಿ: ಮತ್ತೆ ಬೆಂಗಳೂರು ಏರ್ಪೋರ್ಟ್ಗೆ ಜಾಗತಿಕ ಗೌರವ – ಸತತ 4ನೇ ಬಾರಿ ಪ್ರಶಸ್ತಿ

