ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌

0 Min Read
ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಆರತಕ್ಷತೆಯ ಸಂಭ್ರಮದ ವಿಡಿಯೋವನ್ನು ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಾ.4ರಂದು ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್‌ ಹಾಗೂ ರಶ್ಮಿಕಾ ಆರತಕ್ಷತೆ ನಡೆದಿತ್ತು. ಈ ವಿಡಿಯೋವನ್ನು ಹಂಚಿಕೊಂಡಿದ್ದು, ಟ್ರೆಂಡ್‌ನಲ್ಲಿರುವ ತುಳಸಿ ಹಾಡನ್ನು ಹಾಕಿ ಆರತಕ್ಷತೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಗಾಢ ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಹಾಗೂ ಪಂಚೆಯಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ.
ಇನ್ನೂ ಆರತಕ್ಷತೆಯಲ್ಲಿ ಅಲ್ಲು ಅರ್ಜುನ್‌, ಚಿರಂಜೀವಿ, ನಾಗಚೈತನ್ಯ, ಸ್ಯಾಂಡಲ್‌ವುಡ್‌ನ ಶ್ರೀಲೀಲಾ ಹಾಗೂ ಆಶಿಕಾ ರಂಗನಾಥ್‌ ಭಾಗಿಯಾಗಿದ್ದರು.
Share This Article