ಯುದ್ಧದ ಎಫೆಕ್ಟ್‌ – ವಾಣಿಜ್ಯ LPG ಸಿಲಿಂಡರ್‌ಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು

1 Min Read

ನವದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಅನಿಲ ಪೂರೈಕೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ವಾಣಿಜ್ಯ ಸಿಲಿಂಡರ್‌ಗಳಿಗೆ (Commercial LPG Cylinder) ನೀಡಲಾಗಿದ್ದ ರಿಯಾಯಿತಿಗಳನ್ನ ಸ್ಥಗಿತಗೊಳಿಸಿರುವುದಾಗಿ ಇಂಡೇನ್ ಆಯಿಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಿರ್ದೇಶನದ ಮೇರೆಗೆ 19 ಕೆಜಿ ಮತ್ತು 47 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ರಿಯಾಯಿತಿಗಳನ್ನ ರದ್ದುಗೊಳಿಸಿರುವುದಾಗಿ ಹೇಳಿದೆ. ಇದನ್ನೂ ಓದಿ: ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್‌ ಮಾರ್ಮಿಕ ಸಂದೇಶ

ಪ್ರಕಟಣೆಯಲ್ಲಿ ಏನಿದೆ?
ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು 19 ಕೆಜಿ ಮತ್ತು 47.5 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಗೆ ವಿಸ್ತರಿಸಲಾಗಿದ್ದ ಎಲ್ಲಾ ರಿಯಾಯಿತಿಗಳನ್ನ ಮುಂದಿನ ಅಧಿಸೂಚನೆಯವರೆಗೆ ತಡೆಹಿಡಿಯಲಾಗಿದೆ. ಇಂಡಿಯನ್‌ ಆಯಿಲ್‌ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ತಿಳಿಸಿದೆ.

ಸದ್ಯ ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್‌ ದರ 1,814 ರೂಪಾಯಿ ಮತ್ತು 47.5 ಕೆಜಿ ಸಿಲಿಂಡರ್‌ 4,532 ರೂ.ಗಳಿಗೆ ಮಾರಾಟವಾಗುತ್ತಿದೆ. ಇಂಡಿಯನ್‌ ಆಯಿಲ್‌ ಪ್ರಧಾನ ಕಚೇರಿ ನಿರ್ಧಾರದಿಂದ ಹೋಟೆಲ್‌ಗಳು, ವಾಣಿಜ್ಯ ಬಳಕೆದಾರರಿಗೆ ದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ವಾರ್ ಎಫೆಕ್ಟ್; ವಾರದೊಳಗೆ ದುಬಾರಿಯಾಗಲಿದೆ ಡ್ರೈಫ್ರೂಟ್ಸ್

Share This Article