ಚಾಮರಾಜನಗರ | ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

1 Min Read

ಚಾಮರಾಜನಗರ: ಕಾವೇರಿ ನದಿಗೆ (Cauvery River) ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

- Advertisement -

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಈಕೆ ಪತಿ ಲೋಕೇಶ್ ಹಾಗೂ ಮಕ್ಕಳ ಜೊತೆ ಬೆಂಗಳೂರಿನಲ್ಲಿ (Bengaluru ) ನೆಲೆಸಿದ್ದಳು. ಸಂಸಾರದ ವಿಚಾರದಲ್ಲಿ ಬೇಸತ್ತು ವೆಸ್ಲಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಮನೆಯೊಳಗಿಟ್ಟಿದ್ದ ಪೆಟ್ರೋಲ್‌ನಿಂದ ಅಗ್ನಿ ಅವಘಡ – ಮಾಜಿ ಯೋಧ ಸಜೀವ ದಹನ

- Advertisement -

- Advertisement -

ಶವವನ್ನು ನದಿಯಿಂದ ಪೊಲೀಸರು ಮೇಲೆತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುರಿ ಶೆಡ್‌ಗೆ ಆಕಸ್ಮಿಕ ಬೆಂಕಿ – 30 ಕುರಿಗಳು ಸಜೀವ ದಹನ

- Advertisement -

Share This Article