ಕಂಟೇನರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಬೆಂಗಳೂರು ಮೂಲದ ಐವರು ದುರ್ಮರಣ

1 Min Read

ಕೋಲಾರ: ಕಂಟೇನರ್‌ಗೆ (Container) ಹಿಂಬದಿಯಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಪಲಮನೇರು (Palamaner) ಗಂಗವರಂ ಬಳಿ ನಡೆದಿದೆ.

ಮೃತರನ್ನು ಮೋಹನ್ ದಾಸ್ (71), ನಾಗರಾಜ್ (61), ಕುಸುಮ (61), ಜಯಂತಿ (59), ಪೂಜಾ (33) ಗುರುತಿಸಲಾಗಿದೆ. ಕಾರು ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಲ್, ಮೆಸೇಜ್‍ಗೆ ಪ್ರೇಯಸಿಯಿಂದ ನೋ ರಿಪ್ಲೈ – ಸೋಮೇಶ್ವರದ ಯುವಕ ಒಮನ್‍ನಲ್ಲಿ ಆತ್ಮಹತ್ಯೆ

ಘಟನಾ ಸ್ಥಳಕ್ಕೆ ಪಲಮನೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾರ್ಮೂಜ್‌ ಬಿಕ್ಕಟ್ಟಿನ ಬಗ್ಗೆ ದೊಡ್ಡ ನಿರ್ಧಾರ – ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡುವಂತೆ ಟ್ರಂಪ್‌ ಆದೇಶ

ನಿದ್ರೆ ಮಂಪರಿನಿಂದ ಅಪಘಾತ
ಕಾರು ಚಾಲಕನ ನಿದ್ದೆ ಮಂಪರಿನಲ್ಲಿದ್ದ. ಜೊತೆಗೆ ಅಪಘಾತ ನಡೆದ ಸ್ಥಳದಲ್ಲಿ ತಿರುವು ಸಹ ಇರೋದು ತಿಳಿದುಬಂದಿದೆ. ಮೊದಲೇ ವೇಗವಾಗಿದ್ದ ಕಾರು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಪಲಮನೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಪಲಮನೇರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

Share This Article