ಬೆಂಗಳೂರು: ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ (Phone Tapping) ಆರೋಪ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ (VidhanSoudha) ಪ್ರತಿಕ್ರಿಯೆ ನೀಡಿದ ಅವರು, ಫೋನ್ ಟ್ಯಾಪಿಂಗ್ ಬಹಳ ಗಂಭೀರವಾದ ವಿಚಾರ. ಹಿಂದೆ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಡಬೇಕಾಯ್ತು. ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಾಕ್ಷಿ ಕೊಡಬೇಕು. ಆಧಾರರಹಿತ ಆರೋಪ ಮಾಡಿ ಗೊಂದಲ ಸೃಷ್ಟಿಸಬಾರದು ಅಂತ ಕಿಡಿಕಾರಿದರು. ಇದನ್ನೂ ಓದಿ: ದುಬೈ ಮೇಲೆ ಡಬಲ್ ಸ್ಟ್ರೈಕ್ – ಯುಎಸ್ ಸೇನಾ ಕಟ್ಟಡ, ಆಸ್ಟ್ರೇಲಿಯಾದ ಬೇಸ್ ಮೇಲೆ ಇರಾನ್ ದಾಳಿ
ಫೋನ್ ಟ್ಯಾಪಿಂಗ್ ಮಾಡಲು ಸಾಕಷ್ಟು ಪ್ರೊಸಿಜರ್ ಇದೆ. ರಾಜಕೀಯ ಆರೋಪಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಆಧಾರ ಕೊಟ್ಟರೆ ಅಪರಾಧ ಆಗುತ್ತೆ. ಕೇಸ್ ಆಗುತ್ತೆ ತನಿಖೆ ಮಾಡುತ್ತಾರೆ. ರಾಜಕೀಯವಾಗಿ ಇಂಟೆಲಿಜೆನ್ಸ್ ಕೆಲಸ ಮಾಡಲು ಆಗಲ್ಲ. ಫೋನ್ ಟ್ಯಾಪಿಂಗ್ ವಿಚಾರವನ್ನ ಸುಪ್ರಿಂ ಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸುತ್ತೆ. ಮಾಧ್ಯಮಗಳ ಮುಂದೆ ಬರುವ ಮುನ್ನ ತನಿಖಾ ಸಂಸ್ಥೆಗಳಿಗೆ ಆಧಾರಗಳನ್ನ ನೀಡಬೇಕು. ಅದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಅಂತ ಕುಮಾರಸ್ವಾಮಿ ಆರೋಪಕ್ಕೆ ಪೊನ್ನಣ್ಣ ತಿರುಗೇಟು ಕೊಟ್ರು. ಇದನ್ನೂ ಓದಿ: ಖಮೇನಿ ಹತ್ಯೆಗೆ ಭಾರತ ಮೌನ – ಕೇಂದ್ರದ ನಡೆಗೆ ಸೋನಿಯಾ ಗಾಂಧಿ ಖಂಡನೆ


