ತಿರುವಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ (Sabarimala Temple) ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (TDB) ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಈ ಬಗ್ಗೆ ಟಿಬಿಟಿ ಅಧ್ಯಕ್ಷ ಕೆ.ಜಯಕುಮಾರ್ ಮಾತನಾಡಿ, ಗರ್ಭ ಧರಿಸುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್ (Supreme Court) 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು. ಇದನ್ನೂ ಓದಿ: Iran War| ಹೂಡಿಕೆದಾರರಿಗೆ 8 ಲಕ್ಷ ಕೋಟಿ ಲಾಸ್ – 2 ಲಕ್ಷ ದಾಟುತ್ತಾ ಚಿನ್ನದ ದರ?
ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ. ರಾಜ್ಯ ಸರ್ಕಾರವೂ ಇದನ್ನು ಎತ್ತಿಹಿಡಿಯಬೇಕು. 10-50 ವರ್ಷ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವ ಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಗ್ಗೆ ತಮ್ಮ ನಿಲುವನ್ನು ಸುಪ್ರೀಂಗೂ ಹೇಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ:ಚೀನಾದ ಶಸ್ತ್ರಾಸ್ತ ನಂಬಿ ಪ್ರಾಣ ಕಳೆದುಕೊಂಡ ಖಮೇನಿ!
2018ರ ಆದೇಶದ ಪುನರ್ಪರಿಶೀಲನೆ ಅರ್ಜಿ ವಿಚಾರಣೆಗಾಗಿ ಮಾರ್ಚ್ 14ರ ಒಳಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಸೂಚಿಸಿತ್ತು.

